ವಿಶ್ವಸಂಸ್ಥೆಯ ಸರ್ವರ್‌ಗಳ ಮೇಲೆ ಸೈಬರ್ ದಾಳಿ

Update: 2020-01-30 17:59 GMT

ಜಿನೀವ, ಜ. 30: ತನ್ನ ಮೇಲೆ ಕಳೆದ ವರ್ಷ ಸೈಬರ್ ದಾಳಿಯಾಗಿರುವುದನ್ನು ವಿಶ್ವಸಂಸ್ಥೆ ಬುಧವಾರ ಖಚಿತಪಡಿಸಿದೆ. ಆದರೆ, ಯಾವುದೇ ಸೂಕ್ಷ್ಮ ಮಾಹಿತಿಗಳನ್ನು ಪಡೆದುಕೊಳ್ಳಲು ಕನ್ನಗಾರರಿಗೆ ಸಾಧ್ಯವಾಗಿಲ್ಲ ಎಂದು ಹೇಳಿಕೊಂಡಿದೆ.

ಕಳೆದ ವರ್ಷದ ಜುಲೈನಿಂದ ಆರಂಭಿಸಿ ಜಿನೀವ ಮತ್ತು ವಿಯೆನ್ನಾಗಳಲ್ಲಿರುವ ವಿಶ್ವಸಂಸ್ಥೆಯ ಹತ್ತಾರು ಸರ್ವರ್‌ಗಳಿಗೆ ದುಷ್ಕರ್ಮಿಗಳು ಹೇಗೆ ಕನ್ನ ಹಾಕಿದರು ಎನ್ನುವುದಕ್ಕೆ ಸಂಬಂಧಿಸಿದ ವಿಶ್ವಸಂಸ್ಥೆಯ ಗೌಪ್ಯ ವರದಿಯು ತನಗೆ ಲಭಿಸಿದೆ ಎಂದು ‘ನ್ಯೂ ಹ್ಯುಮೇನಿಟೇರಿಯನ್’ ಸಂಸ್ಥೆ ಬುಧವಾರ ವರದಿ ಮಾಡಿದೆ.

ಈ ದಾಳಿಯು ವಿಶ್ವಸಂಸ್ಥೆಯ ಮೇಲೆ ಪರಿಣಾಮ ಬೀರಿದ ಅತ್ಯಂತ ದೊಡ್ಡ ದಾಳಿ ಎಂಬುದಾಗಿ ಅದು ಬಣ್ಣಿಸಿದೆ ಹಾಗೂ ಅದು ದತ್ತಾಂಶ ಸುರಕ್ಷತೆಯ ಬಗ್ಗೆ ಗಂಭೀರ ಕಳವಳಕ್ಕೆ ಕಾರಣವಾಗಿದೆ ಎಂದಿದೆ.

ವಿಶ್ವಸಂಸ್ಥೆಯ ಮಾನವಹಕ್ಕುಗಳ ಹೈಕಮಿಶನರ್ ಕಚೇರಿಯು ಸೈಬರ್ ದಾಳಿಯ ಒಂದು ಗುರಿಯಾಗಿದೆ. ಈ ಸಂಸ್ಥೆಯು ಜಗತ್ತಿನಾದ್ಯಂತ ನಡೆಯುವ ಮಾನವಹಕ್ಕು ಉಲ್ಲಂಘನೆಗಳನ್ನು ಮಾಡುವವರು ಮತ್ತು ಬಲಿಪಶುಗಳಿಗೆ ಸಂಬಂಧಿಸಿದ ಅತ್ಯಂತ ಸೂಕ್ಷ್ಮ ಮಾಹಿತಿಗಳನ್ನು ಸಂಗ್ರಹಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News