×
Ad

ಎಫ್‌ಐಎಚ್ ಪ್ರೊ ಲೀಗ್ ಭಾರತಕ್ಕೆ ಮನ್‌ಪ್ರೀತ್ ಸಾರಥ್ಯ

Update: 2020-02-03 23:24 IST

ಹೊಸದಿಲ್ಲಿ, ಫೆ.3: ವಿಶ್ವದ ನಂ.1 ಬೆಲ್ಜಿಯಂ ವಿರುದ್ಧದ ಮುಂಬರುವ ಎಫ್‌ಐಎಚ್ ಪ್ರೊ ಲೀಗ್ ಪಂದ್ಯಗಳಿಗೆ ಮನ್‌ಪ್ರೀತ್ ಸಿಂಗ್ ಭಾರತ ಪುರುಷರ ಹಾಕಿ ತಂಡದ ನಾಯಕತ್ವವಹಿಸಿಕೊಳ್ಳಲಿದ್ದಾರೆ. ಪ್ರೊ ಲೀಗ್‌ಗೆ 24 ಸದಸ್ಯರುಗಳನ್ನು ಒಳಗೊಂಡ ಭಾರತ ತಂಡವನ್ನು ಸೋಮವಾರ ಪ್ರಕಟಿಸಲಾಗಿದ್ದು,ರಾಜಕುಮಾರ್ ಪಾಲ್ ತಂಡಕ್ಕೆ ಸೇರ್ಪಡೆಯಾಗಿರುವ ಏಕೈಕ ಹೊಸ ಮುಖವಾಗಿದ್ದಾರೆ.

ಭುವನೇಶ್ವರದ ಕಳಿಂಗ ಸ್ಟೇಡಿಯಂನಲ್ಲಿ ಫೆ.8 ಹಾಗೂ 9ರಂದು ನಡೆಯಲಿರುವ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಸಿಂಗ್ ಉಪ ನಾಯಕನಾಗಿರುತ್ತಾರೆ. ಮಿಡ್‌ಫೀಲ್ಡರ್ ರಾಜಕುಮಾರ್ ಪಾಲ್ ಕಳೆದ ಋತುವಿನಲ್ಲಿ ಇಂಡಿಯಾ ಕೋಲ್ಟ್ ಪರವಾಗಿ ಉತ್ತಮ ಪ್ರದರ್ಶನ ನೀಡಿದ್ದು, ಮಲೇಶ್ಯದಲ್ಲಿ ನಡೆದ ಸುಲ್ತಾನ್ ಆಫ್ ಜೊಹೋರ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News