ರಣಜಿಯಲ್ಲಿ ರನ್ ಶಿಖರ ಏರಿದ ವಸೀಂ ಜಾಫರ್

Update: 2020-02-04 14:44 GMT

ಹೊಸದಿಲ್ಲಿ, ಫೆ.4: ವಿದರ್ಭದ ಹಿರಿಯ ಬ್ಯಾಟ್ಸ್‌ಮನ್ ವಸೀಂ ಜಾಫರ್ ರಣಜಿ ಟ್ರೋಫಿಯಲ್ಲಿ 12,000 ರನ್ ಪೂರೈಸಿದರು. ಈ ಸಾಧನೆ ಮಾಡಿದ ಮೊದಲ ಆಟಗಾರನೆಂಬ ಕೀರ್ತಿಗೆ ಭಾಜನರಾದರು.

ಈಗ ನಡೆಯುತ್ತಿರುವ ರಣಜಿ ಟ್ರೋಫಿ ಇಲೈಟ್ ಎ ಗುಂಪಿನ ಪಂದ್ಯದಲ್ಲಿ ಕೇರಳದ ವಿರುದ್ಧ ವಿದರ್ಭದ ಪರ 57 ರನ್ ಗಳಿಸಿದ 41ರ ಹರೆಯದ ಜಾಫರ್ ಈ ಮೈಲುಗಲ್ಲು ತಲುಪಿದರು. ಜಾಫರ್ 1996-97ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಚೊಚ್ಚಲ ಪಂದ್ಯ ಆಡಿದ್ದರು. ಇದೀಗ ಅವರು ದೇಶೀಯ ಕ್ರಿಕೆಟ್‌ನ ಓರ್ವ ದಂತಕತೆಯಾಗಿ ಹೊರಹೊಮ್ಮಿದ್ದಾರೆ. ಈ ಋತುವಿನ ಆರಂಭದಲ್ಲಿ ಬಲಗೈ ಬ್ಯಾಟ್ಸ್‌ಮನ್ ಜಾಫರ್ 150ನೇ ರಣಜಿ ಪಂದ್ಯ ಆಡುವ ಮೂಲಕ ಇತಿಹಾಸ ನಿರ್ಮಿಸಿದ್ದರು. ಟೂರ್ನಮೆಂಟ್‌ನಲ್ಲಿ ಅತ್ಯಂತ ಹೆಚ್ಚು ಪಂದ್ಯಗಳಲ್ಲಿ ಕಾಣಿಸಿಕೊಂಡ ಸಾಧನೆ ಮಾಡಿದ್ದರು. ಜಾಫರ್ ಮುಂಬೈ ಹಾಗೂ ವಿದರ್ಭ ಪರ ರಣಜಿ ಪಂದ್ಯಗಳಲ್ಲಿ ಆಡಿದ್ದಾರೆ. ರಣಜಿ ಟ್ರೋಫಿಯಲ್ಲಿ ಗರಿಷ್ಠ ರನ್ ಗಳಿಸಿದ ಆಟಗಾರರು

ವಸೀಂ ಜಾಫರ್-12,038 ರನ್

ಅಮೋಲ್ ಮುಝುಂದಾರ್-9,202 ರನ್

ದೇವೇಂದ್ರ ಬಂಡೇಲ- 9,201 ರನ್

ಮಿಥುನ್ ಮನ್ಹಾಸ್-8,554 ರನ್

ಯಶ್ಪಾಲ್ ಸಿಂಗ್-8,527 ರನ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News