ಇತಿಹಾಸ ನಿರ್ಮಿಸಿದ ಸರ್ಫರಾಝ್ ಖಾನ್

Update: 2020-02-04 17:35 GMT

ಮುಂಬೈ, ಫೆ.4: ಸೌರಾಷ್ಟ್ರ ವಿರುದ್ಧ ಮತ್ತೊಂದು ಅರ್ಧಶತಕ ಸಿಡಿಸಿದ ಮುಂಬೈ ಬ್ಯಾಟ್ಸ್ ಮನ್ ಸರ್ಫರಾಝ್ ಖಾನ್ ತನ್ನ ಶ್ರೇಷ್ಠ ಫಾರ್ಮ್ ಮುಂದುವರಿಸಿದ್ದಾರೆ. ಕಮಲೇಶ್ ಮಕ್ವಾನಗೆ 78 ರನ್‌ಗೆ ವಿಕೆಟ್ ಒಪ್ಪಿಸಿರುವ 22ರ ಹರೆಯದ ಖಾನ್ ಶತಕ ವಂಚಿತರಾದರು. ಇದೇ ವೇಳೆ 2019-20ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 605 ರನ್ ಗಳಿಸಿ ಇತಿಹಾಸ ನಿರ್ಮಿಸಿದರು. ಒಟ್ಟಾರೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಒಂದೇ ವರ್ಷದಲ್ಲಿ ಗರಿಷ್ಠ ರನ್ ಗಳಿಸಿದ ದಾಖಲೆ ಭಾರತದ ಇನ್ನೊರ್ವ ಆಟಗಾರ ಕೆಸಿ ಇಬ್ರಾಹೀಂ ಹೆಸರಲ್ಲಿದೆ. 1947-48ರಲ್ಲಿ ಇಬ್ರಾಹೀಂ 709 ರನ್ ಗಳಿಸಿದ್ದರು. ತಮಿಳುನಾಡಿನ ಅಭಿನವ ಮುಕುಂದ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 10,000 ರನ್ ಪೂರೈಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News