ಮೊದಲ ಟೆಸ್ಟ್: ಬಾಬರ್, ಶಾನ್ ಶತಕ, ಪಾಕಿಸ್ತಾನಕ್ಕೆ ಮೇಲುಗೈ

Update: 2020-02-09 03:34 GMT

ರಾವಲ್ಪಿಂಡಿ, ಫೆ.8: ಬಾಬರ್ ಆಝಂ(ಔಟಾಗದೆ 143,192 ಎಸೆತ) ಹಾಗೂ ಶಾನ್ ಮಸೂದ್(100,160 ಎಸೆತ) ಶತಕದ ಸಹಾಯದಿಂದ ಪಾಕಿಸ್ತಾನ ತಂಡ ಇಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಮೇಲುಗೈ ಸಾಧಿಸಿದೆ. ಮೊದಲ ದಿನವಾದ ಶುಕ್ರವಾರ ಬಾಂಗ್ಲಾವನ್ನು ಮೊದಲ ಇನಿಂಗ್ಸ್‌ನಲ್ಲಿ 233 ರನ್‌ಗೆ ನಿಯಂತ್ರಿಸಿದ್ದ ಪಾಕ್ ಶನಿವಾರ ತನ್ನ ಮೊದಲ ಇನಿಂಗ್ಸ್ ಆರಂಭಿಸಿ 2ನೇ ದಿನದಾಟದಂತ್ಯಕ್ಕೆ 3 ವಿಕೆಟ್‌ಗಳ ನಷ್ಟಕ್ಕೆ 342 ರನ್ ಗಳಿಸಿದೆ. ಒಟ್ಟು 109 ರನ್ ಮುನ್ನಡೆಯಲ್ಲಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News