ನ್ಯೂಝಿಲ್ಯಾಂಡ್‌ಗೆ ದಂಡ

Update: 2020-02-09 03:35 GMT

ಆಕ್ಲೆಂಡ್, ಫೆ.8: ಭಾರತ ವಿರುದ್ಧ ಶನಿವಾರ ಇಲ್ಲಿ ನಡೆದ ಎರಡನೇ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಕಾಯ್ದುಕೊಂಡಿರುವ ನ್ಯೂಝಿಲ್ಯಾಂಡ್‌ಗೆ ಪಂದ್ಯಶುಲ್ಕದಲ್ಲಿ ಶೇ.60ರಷ್ಟು ದಂಡ ಹೇರಲಾಗಿದೆ.

 ಟಾಮ್ ಲಥಾಮ್ ನೇತೃತ್ವದ ನ್ಯೂಝಿಲ್ಯಾಂಡ್ ತಂಡ ನಿಗದಿತ ಸಮಯದಲ್ಲಿ 3 ಓವರ್ ಕಡಿಮೆ ಬೌಲಿಂಗ್ ಮಾಡಿದೆ. ಹೀಗಾಗಿ ಮ್ಯಾಚ್ ರೆಫರಿ ಕ್ರಿಸ್ ಬ್ರಾಡ್ ದಂಡ ವಿಧಿಸಲು ಶಿಫಾರಸು ಮಾಡಿದ್ದಾರೆ ಎಂದು ಐಸಿಸಿ ಮಾಧ್ಯಮ ಪ್ರಕಟನೆಯೊಂದರಲ್ಲಿ ತಿಳಿಸಿದೆ. ಭಾರತ ವಿರುದ್ಧ ಈಗ ನಡೆಯುತ್ತಿರುವ ದ್ವಿಪಕ್ಷೀಯ ಸರಣಿಯಲ್ಲಿ ನ್ಯೂಝಿಲ್ಯಾಂಡ್ ಇದೇ ಮೊದಲ ಬಾರಿ ನಿಧಾನಗತಿಯ ಬೌಲಿಂಗ್ ಕಾಯ್ದುಕೊಂಡಿದೆ. ಭಾರತ ಕಳೆದ ಮೂರು ಅಂತರ್‌ರಾಷ್ಟ್ರೀಯ ಪಂದ್ಯಗಳಲ್ಲಿ(ಸತತ ಎರಡು ಟ್ವೆಂಟಿ-20 ಹಾಗೂ ಒಂದು ಏಕದಿನ)ನಿಧಾನಗತಿಯ ಬೌಲಿಂಗ್ ಕಾಯ್ದುಕೊಂಡು ದಂಡ ಪಾವತಿಸಿದೆ.

ನ್ಯೂಝಿಲ್ಯಾಂಡ್‌ನ ವಿರುದ್ಧ ಆನ್‌ಫೀಲ್ಡ್ ಅಂಪೈರ್‌ಗಳಾದ ಕ್ರಿಸ್ ಬ್ರೌನ್ ಹಾಗೂ ಬ್ರೂಸ್ ಒಕ್ಸೆನ್‌ಫೋರ್ಡ್, ಮೂರನೇ ಅಂಪೈರ್ ರಸೆರೆ ದಂಡ ವಿಧಿಸುವಂತೆ ವರದಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News