ದ.ಆಫ್ರಿಕಾ ತಂಡಕ್ಕೆ ಸ್ಟೇಯ್ನ್ ವಾಪಸ್

Update: 2020-02-09 03:56 GMT

ಕೇಪ್‌ಟೌನ್, ಫೆ.8: ಮುಂದಿನ ವಾರ ಇಂಗ್ಲೆಂಡ್ ವಿರುದ್ಧ ಆರಂಭವಾಗಲಿರುವ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಕ್ರಿಕೆಟ್ ಸರಣಿಗೆ ದಕ್ಷಿಣ ಆಫ್ರಿಕಾ ತಂಡಕ್ಕೆ ಡೇಲ್ ಸ್ಟೇಯ್ನೆ ವಾಪಸಾಗಿದ್ದಾರೆ. ಈ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯದಲ್ಲಿ ನಡೆಯಲಿರುವ ಟ್ವೆಂಟಿ-20 ವಿಶ್ವಕಪನ್ನು ದೃಷ್ಟಿಯಲ್ಲಿಟ್ಟುಕೊಂಡು ಸ್ಟೇಯ್ನಿಗೆ ಅವಕಾಶ ಕಲ್ಪಿಸಲಾಗಿದೆ.

 ಹಿರಿಯ ಬೌಲರ್ ಸ್ಟೇಯ್ನ 2019ರ ಮಾರ್ಚ್ ನಿಂದ ದಕ್ಷಿಣ ಆಫ್ರಿಕಾದ ಪರ ಯಾವುದೇ ಪಂದ್ಯವನ್ನು ಆಡಿಲ್ಲ. ಇದೀಗ ಅವರು ಭುಜನೋವಿನಿಂದ ಸಂಪೂರ್ಣ ಚೇತರಿಸಿಕೊಂಡಿದ್ದು, ಆಸ್ಟ್ರೇಲಿಯದ ದೇಶೀಯ ಬಿಗ್ ಬ್ಯಾಶ್ ಲೀಗ್ ಮೆಲ್ಬೋರ್ನ್ ಸ್ಟಾರ್ಸ್‌ನಲ್ಲಿ ಇತ್ತೀಚೆಗೆ ಆಡಿದ್ದರು.

 ದಕ್ಷಿಣ ಆಫ್ರಿಕಾ ಟಿ-20 ಸರಣಿಯಿಂದ ಬ್ಯಾಟ್ಸ್‌ಮನ್ ಎಫ್‌ಡು ಪ್ಲೆಸಿಸ್ ಹಾಗೂ ವೇಗದ ಬೌಲರ್ ಕಾಗಿಸೊ ರಬಾಡಗೆ ವಿಶ್ರಾಂತಿ ನೀಡಿದೆ. ಅಕ್ಟೋಬರ್ 18ರಿಂದ ನವೆಂಬರ್ 15ರ ತನಕ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್‌ಗೆ ತಾನು ಆಯ್ಕೆಗೆ ಲಭ್ಯವಿದ್ದೇನೆ ಎಂದು ಎಬಿ ಡಿವಿಲಿಯರ್ಸ್ ಹೇಳಿಕೆ ನೀಡಿದ್ದರೂ ಅವರನ್ನು ತಂಡಕ್ಕೆ ಪರಿಗಣಿಸಲಾಗಿಲ್ಲ. ಇಂಗ್ಲೆಂಡ್ ವಿರುದ್ಧ ಮೊದಲ ಟ್ವೆಂಟಿ-20 ಪಂದ್ಯ ಬುಧವಾರ ಈಸ್ಟ್ ಲಂಡನ್‌ನಲ್ಲಿ ಆರಂಭವಾಗಲಿದೆ. ಆ ನಂತರ ಡರ್ಬನ್(ಫೆ.14)ಹಾಗೂ ಪ್ರಿಟೋರಿಯ(ಫೆ.16)ದಲ್ಲಿ ನಡೆಯಲಿದೆ.

ಟ್ವೆಂಟಿ-20 ತಂಡ: ಕ್ವಿಂಟನ್ ಡಿಕಾಕ್(ನಾಯಕ), ರೀಝಾ ಹೆಂಡ್ರಿಕ್ಸ್, ಟೆಂಬಾ ಬವುಮಾ, ರಾಸ್ಸಿ ವ್ಯಾನ್‌ಡೆರ್ ಡಸ್ಸನ್, ಡೇವಿಡ್ ಮಿಲ್ಲರ್, ಪೀಟ್ ವ್ಯಾನ್ ಬಿಲ್ಜೋನ್, ಡ್ವೇಯ್ನೋ ಪ್ರಿಟೋರಿಯಸ್, ಆ್ಯಂಡಿಲ್ ಫೆಹ್ಲುಕ್ವಾವೊ, ಜಾನ್-ಜಾನ್ ಸ್ಮಟ್ಸ್, ಬೆವುರಾನ್ ಹೆಂಡ್ರಿಕ್ಸ್, ಟಬ್ರೈಝ್ ಶಂಸಿ, ಲುಂಗಿ ಗಿಡಿ, ಸಿಸಾಂಡ ಮಗಾಲಾ, ಜೋರ್ನ್ ಫೋರ್ಟುನ್, ಡೇಲ್ ಸ್ಟೇಯ್ನ್ ಹಾಗೂ ಹೆನ್ರಿಕ್ ಕ್ಲಾಸೆನ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News