ವಿಶ್ವ ಚಾಂಪಿಯನ್ ಬೆಲ್ಜಿಯಂಗೆ ಭಾರತ ಶಾಕ್

Update: 2020-02-09 04:05 GMT

ಭುವನೇಶ್ವರ, ಫೆ.8: ಭಾರತದ ಪುರುಷರ ಹಾಕಿ ತಂಡ ಶನಿವಾರ ಇಲ್ಲಿ ನಡೆದ ಎಫ್‌ಐಎಚ್ ಪ್ರೊ ಲೀಗ್ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಬೆಲ್ಜಿಯಂ ತಂಡವನ್ನು 2-1 ಗೋಲುಗಳ ಅಂತರದಿಂದ ಮಣಿಸಿ ಆಘಾತ ನೀಡಿದೆ. ಮನ್‌ದೀಪ್ ಸಿಂಗ್ ಪಂದ್ಯ ಆರಂಭವಾಗಿ ಎರಡು ನಿಮಿಷ ಕಳೆಯುವಷ್ಟರಲ್ಲಿ ಮೊದಲ ಫೀಲ್ಡ್ ಗೋಲು ಬಾರಿಸಿ ಭಾರತಕ್ಕೆ 1-0 ಆರಂಭಿಕ ಮುನ್ನಡೆ ಒದಗಿಸಿಕೊಟ್ಟರು. ಆದರೆ, 33ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ರನ್ನು ಗೋಲಾಗಿ ಪರಿವರ್ತಿಸಿದ ಬೊಕಾರ್ಡ್ ಅವರು ಬೆಲ್ಜಿಯಂ 1-1 ಅಂತರದಿಂದ ಸಮಬಲ ಸಾಧಿಸಲು ನೆರವಾದರು.

47ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ನ ಮೂಲಕ ಗೋಲು ದಾಖಲಿಸಿದ ರಮಣ್‌ದೀಪ ಸಿಂಗ್ ಆತಿಥೇಯ ತಂಡಕ್ಕೆ 2-1 ಮುನ್ನಡೆ ಒದಗಿಸಿದರು. ಕಳಿಂಗ ಸ್ಟೇಡಿಯಂನಲ್ಲಿ ನೆರೆದಿದ್ದ ತವರು ಪ್ರೇಕ್ಷಕರ ಎದುರು ಸ್ಫೂರ್ತಿಯುತ ಪ್ರದರ್ಶನ ನೀಡಿದ ಭಾರತ ಕೊನೆಯ ತನಕ ಮುನ್ನಡೆ ಕಾಯ್ದುಕೊಂಡು ಗೆಲುವಿನ ನಗೆ ಬೀರಿತು.

ಉಭಯ ತಂಡಗಳು ರವಿವಾರ ಮತ್ತೊಮ್ಮೆ ಮುಖಾಮುಖಿಯಾಗಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News