ಇಂಗ್ಲೆಂಡ್‌ ಕ್ರಿಕೆಟ್ ತಂಡ ಪ್ರಕಟ

Update: 2020-02-11 17:32 GMT

ಲಂಡನ್, ಫೆ.11: ಬೆನ್ ಫೋಕ್ಸ್ ಹಾಗೂ ಕೀಟನ್ ಜೆನ್ನಿಂಗ್ಸ್ 12 ತಿಂಗಳ ಬಳಿಕ ಇಂಗ್ಲೆಂಡ್‌ನ ಟೆಸ್ಟ್ ತಂಡಕ್ಕೆ ವಾಪಸಾಗಿದ್ದಾರೆ. ಈ ಇಬ್ಬರನ್ನು ಶ್ರೀಲಂಕಾ ಕ್ರಿಕೆಟ್ ಪ್ರವಾಸಕ್ಕೆ ಆಯ್ಕೆ ಮಾಡಲಾಗಿದೆ.

  ಲಂಕಾಶೈರ್ ಓಪನರ್ ಜೆನ್ನಿಂಗ್ಸ್ ಹಾಗೂ ಸರ್ರೆ ವಿಕೆಟ್‌ಕೀಪರ್-ಬ್ಯಾಟ್ಸ್ ಮನ್ ಫೋಕ್ಸ್ 12 ತಿಂಗಳ ಹಿಂದೆ ವೆಸ್ಟ್‌ಇಂಡೀಸ್ ಪ್ರವಾಸದ ಬಳಿಕ ತಂಡದಿಂದ ಹೊರಗುಳಿದಿದ್ದರು. ಜೆನ್ನಿಂಗ್ಸ್ ಉಪ ಖಂಡದಲ್ಲಿ ಎಲ್ಲ 17 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದು, ಟೆಸ್ಟ್ ನಲ್ಲಿ ಶತಕವನ್ನು ಉಪಖಂಡದಲ್ಲಿ ಸಿಡಿಸಿದ್ದಾರೆ. 2018ರ ನವೆಂಬರ್‌ನಲ್ಲಿ ಇಂಗ್ಲೆಂಡ್ ತಂಡ ಶ್ರೀಲಂಕಾ ವಿರುದ್ಧ 3-0 ಅಂತರದಿಂದ ವೈಟ್‌ವಾಶ್ ಸಾಧಿಸಿದಾಗ ಫೋಕ್ಸ್ ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.

 2018ರ ನವೆಂಬರ್‌ನಲ್ಲಿ ಈ ತನಕ ಆಡಿರುವ 5 ಟೆಸ್ಟ್‌ನಲ್ಲಿ ಒಂದು ಪಂದ್ಯ ಆಡಿದ್ದರು. ಆ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿದ್ದರು. ಇಂಗ್ಲೆಂಡ್‌ನ ಪರ ಗರಿಷ್ಠ ವಿಕೆಟ್ ಪಡೆದು ದಾಖಲೆ ನಿರ್ಮಿಸಿರುವ ಜೇಮ್ಸ್ ಆ್ಯಂಡರ್ಸನ್ ಇನ್ನೂ ಗಾಯದಿಂದ ಚೇತರಿಸಿಕೊಂಡಿಲ್ಲ. ಕಳೆದ ವರ್ಷದ ವಿಶ್ವಕಪ್‌ನ ಬಳಿಕ ಕಳಪೆ ಫಾರ್ಮ್ ನಲ್ಲಿರುವ ಹೊರತಾಗಿಯೂ ಜೋಸ್ ಬಟ್ಲರ್‌ಗೆ ಆಯ್ಕೆ ಸಮಿತಿಯು ಮತ್ತೊಂದು ಅವಕಾಶ ಕಲ್ಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News