ಏಕದಿನ ಕ್ರಿಕೆಟ್‌ನಲ್ಲಿ ಜಂಟಿ ಕನಿಷ್ಠ ಸ್ಕೋರ್ ಗಳಿಸಿದ ಅಮೆರಿಕ
Update: 2020-02-12 22:34 IST
ಕಿರ್ಟಿಪುರ(ನೇಪಾಳ), ಫೆ.12: ಐಸಿಸಿ ಪುರುಷರ ಕ್ರಿಕೆಟ್ ವರ್ಲ್ಡ್ ಕಪ್ ಲೀಗ್-2 ಪಂದ್ಯದಲ್ಲಿ ನೇಪಾಳದ ವಿರುದ್ಧ ಕೇವಲ 35 ರನ್‌ಗಳಿಗೆ ಆಲೌಟಾಗಿರುವ ಅಮೆರಿಕ ತಂಡ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಜಂಟಿ ಕನಿಷ್ಠ ಮೊತ್ತಕ್ಕೆ ಕುಸಿದಿದೆ.
ಅಮೆರಿಕ ಕೇವಲ 12 ಓವರ್‌ಗಳ ಪಂದ್ಯ ಆಡಿದ್ದು, ಆರಂಭಿಕ ಆಟಗಾರ ಕ್ಸೇವಿಯರ್ ಮಾರ್ಷಲ್ ಸರ್ವಾಧಿಕ ಸ್ಕೋರ್(16)ಗಳಿಸಿದರು.
ಉಳಿದ 9 ಮಂದಿ ಆಟಗಾರರು ಒಂದಂಕಿ ಸ್ಕೋರ್ ದಾಖಲಿಸಿದ್ದು, ನಾಲ್ವರು ಬ್ಯಾಟ್ಸ್‌ಮನ್‌ಗಳು ಶೂನ್ಯಕ್ಕೆ ಔಟಾಗಿದ್ದಾರೆ. ನೇಪಾಳದ ಸ್ಪಿನ್ನರ್ ಸಂದೀಪ್ ಲ್ಯಾಮಿಚೇನ್ 6 ಓವರ್‌ಗಳಲ್ಲಿ 16 ರನ್ ನೀಡಿ 6 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಸುಶಾನ್ ಭಾರಿ 3 ಓವರ್‌ಗಳಲ್ಲಿ ಕೇವಲ 5 ರನ್ ನೀಡಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈ ಹಿಂದೆ ಝಿಂಬಾಬ್ವೆ ತಂಡ ಏಕದಿನ ಕ್ರಿಕೆಟ್‌ನಲ್ಲಿ ಕನಿಷ್ಠ ಸ್ಕೋರ್ ಗಳಿಸಿ ಆಲೌಟಾಗಿತ್ತು. 2004ರಲ್ಲಿ ಹರಾರೆಯಲ್ಲಿ ಶ್ರೀಲಂಕಾ ವಿರುದ್ಧ ಝಿಂಬಾಬ್ವೆ 35 ರನ್‌ಗೆ ಸರ್ವಪತನವಾಗಿತ್ತು.