ಫೆಬ್ರವರಿ 15ಕ್ಕೆ ಇಶಾಂತ್ ಶರ್ಮಾಗೆ ಫಿಟ್ನೆಸ್ ಟೆಸ್ಟ್

Update: 2020-02-12 17:10 GMT

ಹೊಸದಿಲ್ಲಿ, ಫೆ.12: ಭಾರತೀಯ ಕ್ರಿಕೆಟ್ ತಂಡ ಫೆ.14ರಿಂದ ಅಭ್ಯಾಸ ಪಂದ್ಯವನ್ನಾಡುವ ಮೂಲಕ ನ್ಯೂಝಿಲ್ಯಾಂಡ್‌ನಲ್ಲಿ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಸಜ್ಜಾಗಲಿದೆ. ತಾನು ನ್ಯೂಝಿಲ್ಯಾಂಡ್ ವಿಮಾನ ಏರಬಹುದೇ ಎಂದು ತಿಳಿದುಕೊಳ್ಳಲು ಇಶಾಂತ್ ಫೆ.15ರಂದು ಬೆಂಗಳೂರಿನಲ್ಲಿ ಫಿಟ್ನೆಸ್ ಪರೀಕ್ಷೆಗೆ ಒಳಗಾಗಲಿದ್ದಾರೆ.

31ರ ಹರೆಯದ ಇಶಾಂತ್ ಜನವರಿ 21ರಂದು ವಿದರ್ಭ ವಿರುದ್ಧ ರಣಜಿ ಟ್ರೋಫಿ ಪಂದ್ಯ ಆಡುವಾಗ ಬಲಮಂಡಿ ನೋವಿಗೆ ಒಳಗಾಗಿದ್ದರು. ಇಶಾಂತ್‌ಗೆ ಆರು ವಾರಗಳ ಕಾಲ ವಿಶ್ರಾಂತಿಗೆ ವೈದ್ಯರು ಸಲಹೆ ನೀಡಿದ್ದಾರೆಂದು ಹೇಳಲಾಗಿತ್ತು. ವೇಗದ ಬೌಲರ್ ಇಶಾಂತ್ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿಯ(ಎನ್‌ಸಿಎ)ಮೇಲುಸ್ತುವಾರಿಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದರು.

ಇಶಾಂತ್ ಫೆ.14-15ರಂದು ಫಿಟ್ನೆಸ್ ಪರೀಕ್ಷೆಗೆ ಒಳಗಾಗಲಿದ್ದಾರೆ. ಆ ಬಳಿಕ ಅವರನ್ನು ತಂಡಕ್ಕೆ ಕರೆ ನೀಡಲಾಗುವುದು ಎಂದು ಭಾರತೀಯ ಟೀಮ್ ಮ್ಯಾನೇಜ್‌ಮೆಂಟ್ ಮೂಲಗಳು ತಿಳಿಸಿವೆ.

ಆಯ್ಕೆ ಸಮಿತಿಯು ಇಶಾಂತ್‌ರನ್ನು ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಿತ್ತು. ಇಶಾಂತ್ ಅವರು ಉಮೇಶ್ ಯಾದವ್ ಜೊತೆಗೆ ಫೆ.6ರಂದು ನ್ಯೂಝಿಲ್ಯಾಂಡ್‌ಗೆ ಪ್ರಯಾಣಿಸಬೇಕಾಗಿತ್ತು.

ಫಿಟ್ನೆಸ್ ಖಚಿತಪಡಿಸಲು ಎರಡು ಮಾರ್ಗವಿದೆ. ಒಂದು ಕ್ಲಿನಿಕಲ್ ಫಿಟ್ನೆಸ್, ಮತ್ತೊಂದು ಮ್ಯಾಚ್ ಫಿಟ್ನೆಸ್. ಕ್ಲಿನಿಕಲ್ ಟೆಸ್ಟ್‌ನಲ್ಲಿ ಆಟಗಾರ ರನ್ನಿಂಗ್ ಹಾಗೂ ಚಾಣಾಕ್ಷತೆ ಸಹಿತ ಹಲವು ದೈಹಿಕ ಪರೀಕ್ಷೆಗೆ ಒಳಗಾಗುತ್ತಾನೆ. ಮ್ಯಾಚ್ ಫಿಟ್ನೆಸ್ ಆಟಗಾರ ಎಷ್ಟು ಫಿಟ್ ಇದ್ದಾನೆ ಎಂಬುದನ್ನು ಅವಲಂಬಿಸಿರುತ್ತದೆ’’ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News