ಹಡಗಿನಲ್ಲಿ ಹೊಸದಾಗಿ 99 ಮಂದಿಗೆ ಸೋಂಕು
Update: 2020-02-17 22:09 IST
ಟೋಕಿಯೊ, ಫೆ. 17: ಜಪಾನ್ ಕರಾವಳಿಯಲ್ಲಿ ದಿಗ್ಬಂಧನದಲ್ಲಿ ಇರಿಸಲ್ಪಟ್ಟಿರುವ ‘ಡೈಮಂಡ್ ಪ್ರಿನ್ಸೆಸ್’ ಹಡಗಿನಲ್ಲಿರುವವರ ಪೈಕಿ ಹೊಸದಾಗಿ 99 ಮಂದಿಯಲ್ಲಿ ಕೊರೋನವೈರಸ್ ಕಾಯಿಲೆ ಕಾಣಿಸಿಕೊಂಡಿದೆ ಎಂದು ಜಪಾನ್ ಮಾಧ್ಯಮಗಳು ಸೋಮವಾರ ವರದಿ ಮಾಡಿವೆ.
ಇದರೊಂದಿಗೆ ಹಡಗಿನಲ್ಲಿ ಮಾರಕ ಸೋಂಕಿಗೆ ಒಳಗಾದವರ ಸಂಖ್ಯೆ 454ಕ್ಕೆ ಏರಿದೆ.
ಹಡಗಿನ ದಿಗ್ಬಂಧನದ ಅವಧಿ ಬುಧವಾರವೇ ಮುಗಿದರೂ, ಸೋಂಕಿಗೆ ಒಳಗಾಗುತ್ತಿರುವ ಪ್ರಯಾಣಿಕರ ಸಂಖ್ಯೆಯಲ್ಲಿ ತೀವ್ರ ಏರಿಕೆಯಾಗಿರುವುದರಿಂದ ಅದರ ದಿಗ್ಬಂಧನದ ಅವಧಿ ಮುಂದುವರಿದಿದೆ.