ಕೊರೋನವೈರಸ್‌ನಿಂದ ಈ ವರ್ಷ ಜಾಗತಿಕ ಆರ್ಥಿಕ ಬೆಳವಣಿಗೆ ಬುಡಮೇಲು

Update: 2020-02-17 17:06 GMT

ದುಬೈ, ಫೆ. 17: ಮಾರಕ ಕೊರೋನವೈರಸ್ ಸಾಂಕ್ರಾಮಿಕವು ಈ ವರ್ಷ ಜಾಗತಿಕ ಆರ್ಥಿಕ ಬೆಳವಣಿಗೆಯನ್ನು ಬುಡಮೇಲು ಮಾಡಬಹುದಾಗಿದೆ ಎಂದು ಅಂತರ್‌ರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯ ಮುಖ್ಯಸ್ಥರು ರವಿವಾರ ಹೇಳಿದ್ದಾರೆ. ಆದರೆ, ಅದರ ಬೆನ್ನಿಗೇ ತೀವ್ರ ಮತ್ತು ಕ್ಷಿಪ್ರ ಪುನಶ್ಚೇತನ ಸಾಧ್ಯವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘‘ಆರ್ಥಿಕ ಬೆಳವಣಿಗೆಯಲ್ಲಿ 0.1-0.2 ಶೇಕಡದಷ್ಟು ಕಡಿತ ಉಂಟಾಗಬಹುದು ಎಂದು ನಾವು ಭಾವಿಸಿದ್ದೇವೆ’’ ಎಂದು ಐಎಂಎಫ್ ಆಡಳಿತ ನಿರ್ದೇಶಕಿ ಕ್ರಿಸ್ಟಲೀನಾ ಜಾರ್ಜಿಯೇವ ದುಬೈಯಲ್ಲಿ ಗ್ಲೋಬಲ್ ವಿಮೆನ್ ಫೋರಂನಲ್ಲಿ ಹೇಳಿದರು.

ಕೊರೋನವೈರಸ್ ಸಾಂಕ್ರಾಮಿಕ ರೋಗವನ್ನು ಎಷ್ಟು ಬೇಗ ನಿಯಂತ್ರಿಸಲಾಗುತ್ತದೆ ಎನ್ನುವುದರ ಮೇಲೆ ಈ ರೋಗದ ಪೂರ್ಣ ಪರಿಣಾಮವು ನಿರ್ಧಾರಗೊಳ್ಳುತ್ತದೆ ಎಂದು ಅವರು ಹೇಳಿದರು.

‘‘ಅವಸರದ ನಿರ್ಧಾರಗಳಿಗೆ ಬರದಂತೆ ನಾನು ಪ್ರತಿಯೊಬ್ಬರಲ್ಲೂ ಮನವಿ ಮಾಡುತ್ತೇನೆ. ಅಲ್ಲಿ ಈಗಲೂ ಭಾರೀ ಪ್ರಮಾಣದಲ್ಲಿ ಅನಿಶ್ಚಿತತೆಯಿದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News