‘ಡೈಮಂಡ್ ಪ್ರಿನ್ಸೆಸ್’ ಹಡಗಿನಿಂದ ಕೆಳಗಿಳಿದ ಮೊದಲ ಪ್ರವಾಸಿಗರ ತಂಡ

Update: 2020-02-19 17:49 GMT

ಯೊಕೊಹಾಮ (ಜಪಾನ್), ಫೆ. 19: ಜಪಾನ್‌ನ ಕರಾವಳಿ ನಗರ ಯೊಕೊಹಾಮದಲ್ಲಿ ಲಂಗರು ಹಾಕಿರುವ ಪ್ರವಾಸಿ ಹಡಗು ‘ಡೈಮಂಡ್ ಪ್ರಿನ್ಸೆಸ್’ನಿಂದ ಮೊದಲ ತಂಡವು ಹೊರಬಂದಿದೆ.

ಹಡಗು ತನ್ನ 14 ದಿನಗಳ ದಿಗ್ಬಂಧನದ ಅವಧಿಯನ್ನು ಪೂರೈಸಿರುವ ಹಿನ್ನೆಲೆಯಲ್ಲಿ, ಕೊರೋನವೈರಸ್ ಸೋಂಕಿಗೆ ಒಳಗಾಗದ ಪ್ರಯಾಣಿಕರನ್ನು ಹೊರಗೆ ಬಿಡಲಾಗುತ್ತಿದೆ. ಸುಮಾರು 3,700 ಪ್ರವಾಸಿಗರನ್ನು ಹೊತ್ತಿರುವ ಹಡಗು ಚೀನಾದ ಹೊರಗೆ ಭಾರೀ ಪ್ರಮಾಣದಲ್ಲಿ ಕೊರೋನವೈರಸ್ ಸೋಂಕಿನ ಆತಂಕವನ್ನು ಒಡ್ಡಿತ್ತು.

ಸೋಂಕು ಇರದಿರುವುದು ಪರೀಕ್ಷೆಯಲ್ಲಿ ದೃಢಪಟ್ಟ ಸುಮಾರು 500 ಮಂದಿಗೆ ಹಡಗಿನಿಂದ ಇಳಿಯಲು ಅನುಮತಿ ನೀಡಲಾಗಿದೆ.

‘ಎನ್‌ಸಿಒವಿ ಸೋಂಕಿನ ಅಪಾಯ ಒಡ್ಡುತ್ತಿಲ್ಲ’ ಎಂಬ ಪ್ರಮಾಣಪತ್ರವನ್ನು ಸೋಂಕುರಹಿತರಿಗೆ ನೀಡಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News