ದಕ್ಷಿಣ ಕೊರಿಯದಲ್ಲಿ ಮೊದಲ ಕೊರೋನವೈರಸ್ ಸಾವು

Update: 2020-02-20 15:20 GMT

ಸಿಯೋಲ್ (ದಕ್ಷಿಣ ಕೊರಿಯ), ಫೆ. 20: ಕೊರೋನವೈರಸ್ ಸೋಂಕಿನಿಂದಾಗಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ದಕ್ಷಿಣ ಕೊರಿಯ ಗುರುವಾರ ಪ್ರಕಟಿಸಿದೆ. ಇದು ಆ ದೇಶದಲ್ಲಿ ನಡೆದ ಮೊದಲ ಕೊರೋನವೈರಸ್ ಸಾವಾಗಿದೆ.

ಅದೇ ವೇಳೆ, ದಕ್ಷಿಣ ಕೊರಿಯದಲ್ಲಿ ಮಾರಕ ಸೋಂಕು ತಗಲಿದವರ ಸಂಖ್ಯೆ 104ಕ್ಕೇರಿದೆ ಎಂದು ದೇಶದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ ಗುರುವಾರ ತಿಳಿಸಿದೆ.

ಮೊದಲ ಕೊರೋನವೈರಸ್ ಸಾವಿನ ಬಗ್ಗೆ ದಕ್ಷಿಣ ಕೊರಿಯವು ಹೆಚ್ಚಿನ ವಿವರಗಳನ್ನು ನೀಡಿಲ್ಲ. ಆದರೆ, ಡೇಗು ಸಮೀಪದ ಆಸ್ಪತ್ರೆಯೊಂದರಲ್ಲಿ ಸಾವು ಸಂಭವಿಸಿದೆ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News