ವಾಶಿಂಗ್ಟನ್ ಡಿಸಿ ಸರ್ಕೀಟ್‌ನ ಮುಖ್ಯ ನ್ಯಾಯಾಧೀಶರಾಗಿ ಶ್ರೀ ಶ್ರೀನಿವಾಸನ್

Update: 2020-02-20 16:09 GMT

ವಾಶಿಂಗ್ಟನ್, ಫೆ. 20: ಭಾರತ ಮೂಲದ ಶ್ರೀ ಶ್ರೀನಿವಾಸನ್‌ರನ್ನು ಅಮೆರಿಕದ ವಾಶಿಂಗ್ಟನ್ ಡಿಸಿ ಸರ್ಕೀಟ್‌ನ ಮುಖ್ಯ ನ್ಯಾಯಾಧೀಶರಾಗಿ ನೇಮಿಸಲಾಗಿದೆ. ಅವರು ಅಮೆರಿಕದ ಮೇಲ್ಮನವಿ ನ್ಯಾಯಾಲಯವೊಂದರ ಮುಖ್ಯ ನ್ಯಾಯಾಧೀಶರಾಗಿ ನೇಮಕಗೊಂಡ ಮೊದಲ ಭಾರತೀಯ ಅಮೆರಿಕನ್ ಮತ್ತು ಏಶ್ಯನ್ ಆಗಿದ್ದಾರೆ.

ಇದಕ್ಕೂ ಮೊದಲು ಈ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿದ್ದ ಮೆರಿಕ್ ಗಾರ್‌ಲ್ಯಾಂಡ್ ಫೆಬ್ರವರಿ 12ರಂದು ನಿವೃತ್ತರಾಗಿದ್ದಾರೆ.

ಡಿಸಿ ಸರ್ಕೀಟ್ ಮೇಲ್ಮನವಿ ನ್ಯಾಯಾಲಯವನ್ನು ಸುಪ್ರೀಂ ಕೋರ್ಟ್ ಬಳಿಕ ಅಮೆರಿಕದ ಎರಡನೇ ಅತ್ಯಂತ ಪ್ರಭಾವಶಾಲಿ ನ್ಯಾಯಾಲಯ ಎಂಬುದಾಗಿ ಪರಿಗಣಿಸಲಾಗಿದೆ ಹಾಗೂ ಸುಪ್ರೀಂ ಕೋರ್ಟ್‌ಗೆ ಹೋಗಲು ಅದು ರಹದಾರಿಯಾಗಿದೆ.

ಚಂಡೀಗಢದಲ್ಲಿ ಜನಿಸಿರುವ ಶ್ರೀ ಶ್ರೀನಿವಾಸನ್ 2013ರಲ್ಲಿ ಡಿಸಿ ನ್ಯಾಯಾಲಯಕ್ಕೆ ಸೇರ್ಪಡೆಗೊಂಡಿದ್ದರು. ಅಂದು ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್, ಅವರ ಪತ್ನಿ ಗುರ್ಶರಣ್ ಕೌರ್ ಮತ್ತು ಕುಟುಂಬ ಸದಸ್ಯರು ಭಾಗವಹಿಸಿದ್ದರು. ಈ ಎರಡು ಕುಟುಂಬಗಳು ಚಂಡೀಗಢದಲ್ಲಿ ಸ್ನೇಹಿತರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News