ಪೌರತ್ವ ಕಾಯ್ದೆ ಮುಸ್ಲಿಮರಿಗೆ ಪೌರತ್ವ ಹಕ್ಕು ನಿರಾಕರಣೆಗೆ ಕಾರಣವಾಗಬಹುದು: ಅಮೆರಿಕ ಸಮಿತಿ ಆತಂಕ

Update: 2020-02-20 16:30 GMT
file photo

ವಾಷಿಂಗ್ಟನ್, ಫೆ.20: ಭಾರತ ಸರಕಾರ ಜಾರಿಗೊಳಿಸಲು ನಿರ್ಧರಿಸಿರುವ ಪೌರತ್ವ ಕಾಯ್ದೆಯು ಪೌರತ್ವ ಸಾಬೀತುಪಡಿಸುವ ಧಾರ್ಮಿಕ ಪರೀಕ್ಷೆಯ ಪರಿಸ್ಥಿತಿಯನ್ನು ಸೃಷ್ಟಿಸಬಹುದು ಎಂದು ಅಂತರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯಕ್ಕಾಗಿನ ಅಮೆರಿಕದ ಆಯೋಗ (ಯುಎಸ್‌ಸಿಐಆರ್‌ಎಫ್) ಟೀಕಿಸಿದೆ.

 ಪೌರತ್ವ ಕಾಯ್ದೆಗೆ ಅಂಗೀಕಾರ ದೊರೆತ ತಕ್ಷಣ ಭಾರತದಾದ್ಯಂತ ವ್ಯಾಪಕ ಪ್ರತಿಭಟನೆ ನಡೆದಿದೆ. ಭಾರತ ಸರಕಾರ ಇದನ್ನು ಬಲಪ್ರಯೋಗಿಸಿ ಹತ್ತಿಕ್ಕಲು ಪ್ರಯತ್ನಿಸಿದೆ. ಜೊತೆಗೆ, ಎನ್‌ಆರ್‌ಸಿ ಪ್ರಕ್ರಿಯೆಯು ಭಾರತದಲ್ಲಿ ಮುಸ್ಲಿಮರಿಗೆ ವ್ಯಾಪಕವಾಗಿ ಪೌರತ್ವ ಹಕ್ಕು ನಿರಾಕರಣೆಗೆ ದಾರಿ ಮಾಡಿಕೊಡಬಹುದು ಎಂಬ ಆತಂಕಕ್ಕೆ ಕಾರಣವಾಗಿದೆ ಎಂದು ಯುಎಸ್‌ಸಿಐಆರ್‌ಎಫ್ ಬುಧವಾರ ಬಿಡುಗಡೆಗೊಳಿಸಿದ ವಾಸ್ತವ ವರದಿಯಲ್ಲಿ ತಿಳಿಸಲಾಗಿದೆ.

ಪೌರತ್ವ ಕಾಯ್ದೆಯನ್ನು ಸದನದಲ್ಲಿ ಮಂಡಿಸುವ ಮೊದಲು ಈ ಬಗ್ಗೆ ಪ್ರತಿಕ್ರಿಯಿಸಿದ್ದ ಯುಎಸ್‌ಸಿಐಆರ್‌ಎಫ್, ಇದು ತಪ್ಪು ದಿಕ್ಕಿನಲ್ಲಿ ನಡೆಸಿದ ಅಪಾಯಕಾರಿ ತಿರುವು ಆಗಿದ್ದು , ಇಂತಹ ಧಾರ್ಮಿಕ ಮಾನದಂಡವನ್ನು ಒಳಗೊಂಡಿರುವ ಮಸೂದೆಯನ್ನು ಅಂಗೀಕರಿಸಿದರೆ ಅಮೆರಿಕವು ಭಾರತದ ವಿರುದ್ಧ ಆರ್ಥಿಕ ದಿಗ್ಭಂದನೆಯನ್ನು ವಿಧಿಸಬೇಕು ಎಂದು ಆಗ್ರಹಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News