ಕೊರೋನವೈರಸ್ ಸೋಂಕಿಗೆ ಇರಾನ್‌ನಲ್ಲಿ ಇಬ್ಬರು ಬಲಿ
Update: 2020-02-20 23:25 IST
ಟೆಹರಾನ್ (ಇರಾನ್), ಫೆ. 20: ಇರಾನ್‌ನಲ್ಲಿ ಕೊರೋನವೈರಸ್ ಸೋಂಕಿನಿಂದಾಗಿ ಬುಧವಾರ ಇಬ್ಬರು ಸಾವಿಗೀಡಾಗಿದ್ದಾರೆ ಎಂದು ದೇಶದ ಆರೋಗ್ಯ ಸಚಿವಾಲಯ ಘೋಷಿಸಿದೆ.
ಜಗತ್ತಿನಾದ್ಯಂತ ಭೀತಿ ಹುಟ್ಟಿಸಿರುವ ರೋಗದಿಂದಾಗಿ ಇರಾನ್‌ನಲ್ಲಿ ಸಾವು ಸಂಭವಿಸಿರುವುದು ಇದೇ ಮೊದಲ ಬಾರಿಯಾಗಿದೆ ಹಾಗೂ ಚೀನಾದ ಹೊರಗೆ ಸಂಭವಿಸಿರುವ 7 ಮತ್ತು 8ನೇ ಸಾವು ಇದಾಗಿದೆ.
ಪವಿತ್ರ ನಗರ ಕೋಮ್‌ನಲ್ಲಿ ಇಬ್ಬರು ವೃದ್ಧರು ಈ ರೋಗಕ್ಕೆ ಬಲಿಯಾಗಿದ್ದಾರೆ ಎಂದು ಸರಕಾರಿ ಸುದ್ದಿ ಸಂಸ್ಥೆ ‘ಇರ್ನ’ ವರದಿ ಮಾಡಿದೆ.