ಕೊರೋನವೈರಸ್: ಮೃತರ ಸಂಖ್ಯೆ 2,233ಕ್ಕೆ ಏರಿಕೆ

Update: 2020-02-21 16:17 GMT
file photo

ಬೀಜಿಂಗ್, ಫೆ. 21: ಚೀನಾದಲ್ಲಿ ಕೊರೋನವೈರಸ್ ಸೋಂಕಿನಿಂದಾಗಿ ಮೃತಪಟ್ಟವರ ಸಂಖ್ಯೆ ಶುಕ್ರವಾರ 2,233ಕ್ಕೆ ಏರಿದೆ. ಮಾರಕ ಸೋಂಕಿನ ಅತ್ಯಂತ ಹೆಚ್ಚು ಹಾನಿಗೆ ಒಳಗಾಗಿರುವ ಮಧ್ಯ ಚೀನಾದ ಹುಬೈ ಪ್ರಾಂತದಲ್ಲಿ ಹೊಸದಾಗಿ 115 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ಈ ಪೈಕಿ ಅತಿ ಹೆಚ್ಚಿನ ಸಂಖ್ಯೆಯ ಸಾವುಗಳು ಹುಬೈ ಪ್ರಾಂತದ ರಾಜಧಾನಿ ವುಹಾನ್‌ನಿಂದ ವರದಿಯಾಗಿವೆ ಎಂದು ಹುಬೈ ಆರೋಗ್ಯ ಆಯೋಗ ಶುಕ್ರವಾರ ಬಿಡುಗಡೆ ಮಾಡಿದ ದೈನಂದಿನ ವರದಿ ತಿಳಿಸಿದೆ.

ಚೀನಾದಲ್ಲಿ ಈವರೆಗೆ ಒಟ್ಟು ಸುಮಾರು 75,000 ಮಂದಿ ಕೊರೋನವೈರಸ್ ಸೋಂಕಿಗೆ ಒಳಗಾಗಿದ್ದಾರೆ ಹಾಗೂ ಇತರ 25ಕ್ಕೂ ಅಧಿಕ ದೇಶಗಳಲ್ಲಿ ನೂರಾರು ಮಂದಿ ಸೋಂಕಿಗೆ ಒಳಗಾಗಿದ್ದಾರೆ.

ಹುಬೈ ಪ್ರಾಂತದಲ್ಲಿ ಹೊಸದಾಗಿ 411 ಸೋಂಕಿನ ಪ್ರಕರಣಗಳು ದೃಢಪಟ್ಟಿವೆ ಎಂದು ಎಂದು ಆಯೋಗ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News