ಐರ್‌ಲ್ಯಾಂಡ್ ಚುನಾವಣೆಯಲ್ಲಿ ಅಸ್ಥಿರ ಫಲಿತಾಂಶ: ಪ್ರಧಾನಿ ಲಿಯೋ ವರಾದ್ಕರ್ ರಾಜೀನಾಮೆ

Update: 2020-02-21 16:39 GMT

ಡಬ್ಲಿನ್ (ಐರ್‌ಲ್ಯಾಂಡ್), ಫೆ. 21: ಐರ್‌ಲ್ಯಾಂಡ್ ಪ್ರಧಾನಿ ಲಿಯೊ ವರಾದ್ಕರ್ ಗುರುವಾರ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಆದರೆ, ಅವರು ದೇಶದ ಉಸ್ತುವಾರಿ ನಾಯಕನಾಗಿ ಅಧಿಕಾರದಲ್ಲಿ ಮುಂದುವರಿದಿದ್ದಾರೆ.

ಫೆಬ್ರವರಿ 8ರಂದು ನಡೆದ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಬಂದಿಲ್ಲದ ಹಿನ್ನೆಲೆಯಲ್ಲಿ, ದೇಶದ ಮೂರು ಪ್ರಮುಖ ಪಕ್ಷಗಳು ಮೈತ್ರಿ ಸರಕಾರ ರಚನೆ ಸಂಬಂಧ ಮಾತುಕತೆಯಲ್ಲಿ ತೊಡಗಿರುವಂತೆಯೇ, ಲಿಯೋ ವರಾದ್ಕರ್ ಅಧಿಕಾರದಿಂದ ಕೆಳಗಿಳಿದಿದ್ದಾರೆ.

 ಚುನಾವಣೆಯ ಬಳಿಕ ಐರ್‌ಲ್ಯಾಂಡ್ ಸಂಸತ್ತಿನ ಕೆಳಮನೆಯ ಮೊದಲ ಅಧಿವೇಶನದ ನಡೆದ ನಂತರ ವರಾದ್ಕರ್ ಅಧ್ಯಕ್ಷ ಮೈಕಲ್ ಹಿಗಿನ್ಸ್‌ಗೆ ತನ್ನ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

 160 ಸದಸ್ಯ ಬಲದ ಕೆಳಮನೆಯಲ್ಲಿ ಐರಿಶ್ ರಿಪಬ್ಲಿಕ್ ಆರ್ಮಿಯ ರಾಜಕೀಯ ಘಟಕವಾಗಿದ್ದ ಸಿನ್ ಫೀನ್ ಪಕ್ಷವು 37 ಸ್ಥಾನಗಳನ್ನು ಗಳಿಸಿದೆ. ಕಳೆದ ಬಾರಿಗಿಂತ ಈ ಬಾರಿ ಅದು 15 ಸ್ಥಾನಗಳನ್ನು ಹೆಚ್ಚಾಗಿ ಗಳಿಸಿದೆ. ಲಿಯೋ ವರಾದ್ಕರ್‌ರ ಫೈನ್ ಗೇಲ್ ಪಕ್ಷವು 35 ಸ್ಥಾನಗಳನ್ನು ಗಳಿಸಿದೆ ಹಾಗೂ ಅದು ಕಳೆದ ಬಾರಿಗಿಂತ 12 ಸ್ಥಾನಗಳನ್ನು ಕಳೆದುಕೊಂಡಿದೆ. ಇನ್ನೊಂದು ಪಕ್ಷ ಫ್ಲಾನಾ ಫೇಲ್ ಈ ಬಾರಿ 37 ಸ್ಥಾನಗಳನ್ನು ಗಳಿಸಿದ್ದು, ಕಳೆದ ಬಾರಿಗಿಂತ 8 ಕಡಿಮೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News