ಸಂಸತ್ ತನಿಖೆಗೆ ಅಡ್ಡಿ: ಟ್ರಂಪ್ ಮಿತ್ರನಿಗೆ 40 ತಿಂಗಳು ಜೈಲು

Update: 2020-02-21 16:47 GMT

ವಾಶಿಂಗ್ಟನ್, ಫೆ. 21: ಅಮೆರಿಕದ ಸಂಸತ್ತು ಕಾಂಗ್ರೆಸ್‌ನ ತನಿಖೆಗೆ ಅಡ್ಡಿಯುಂಟು ಮಾಡಿದ ಪ್ರಕರಣದಲ್ಲಿ ದೇಶದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ದೀರ್ಘಕಾಲೀನ ಮಿತ್ರ ರೋಜರ್ ಸ್ಟೋನ್‌ಗೆ ಗುರುವಾರ 40 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಈ ಪ್ರಕರಣದ ಹಿನ್ನೆಲೆಯಲ್ಲಿ, ನ್ಯಾಯಾಂಗ ವ್ಯವಸ್ಥೆಯಲ್ಲಿ ಅಮೆರಿಕ ಅಧ್ಯಕ್ಷರ ಹಸ್ತಕ್ಷೇಪದ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ರಿಪಬ್ಲಿಕನ್ ನಾಯಕ ಹಾಗೂ ಅಧ್ಯಕ್ಷರ ಹಳೆಯ ನಂಬಿಕಸ್ತರಲ್ಲಿ ಒಬ್ಬರಾಗಿರುವ ಸ್ಟೋನ್ ಕಾಂಗ್ರೆಸ್‌ಗೆ ಸುಳ್ಳು ಹೇಳಿದ ಆರೋಪವು ನವೆಂಬರ್‌ನಲ್ಲಿ ಸಾಬೀತಾಗಿತ್ತು. 2016ರ ಚುನಾವಣೆಯಲ್ಲಿ ಟ್ರಂಪ್ ಪ್ರಚಾರ ತಂಡವು ರಶ್ಯದ ಜೊತೆ ಸೇರಿ ಟ್ರಂಪ್ ಎದುರಾಳಿ ವಿರುದ್ಧ ಪಿತೂರಿ ಹೂಡಿತ್ತು ಎಂಬ ಆರೋಪದಲ್ಲಿ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನಡೆಸಿದ ತನಿಖೆಯ ಹಾದಿ ತಪ್ಪಿಸಲು ಸ್ಟೋನ್ ಯತ್ನಿಸಿದ್ದರು ಹಾಗೂ ಸಾಕ್ಷವೊಂದನ್ನು ತಿರುಚಿದ್ದರು ಎಂದು ಆರೋಪಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News