ಭಾರತದ ವಿಶೇಷ ವಿಮಾನಕ್ಕೆ ಅನುಮತಿ ವಿಳಂಬಿಸಲಾಗುತ್ತಿಲ್ಲ: ಚೀನಾ

Update: 2020-02-21 16:58 GMT

ಬೀಜಿಂಗ್, ಫೆ. 21: ವೈದ್ಯಕೀಯ ಸಲಕರಣೆಗಳನ್ನು ಸರಬರಾಜು ಮಾಡಲು ಹಾಗೂ ಉಳಿದಿರುವ ಭಾರತೀಯರನ್ನು ಕರೆತರಲು ಕೊರೋನವೈರಸ್ ಪೀಡಿತ ವುಹಾನ್ ನಗರಕ್ಕೆ ಹೋಗಲಿರುವ ವಿಶೇಷ ಭಾರತೀಯ ವಿಮಾನಕ್ಕೆ ಅನುಮತಿ ನೀಡುವುದನ್ನು ವಿಳಂಬಿಸಲಾಗುತ್ತಿದೆ ಎಂಬ ಆರೋಪವನ್ನು ಚೀನಾ ಶುಕ್ರವಾರ ನಿರಾಕರಿಸಿದೆ. ವಿಮಾನ ಹಾರಾಟದ ಸಮಯವನ್ನು ನಿಗದಿಪಡಿಸಲು ಉಭಯ ದೇಶಗಳ ಸಂಬಂಧಪಟ್ಟ ಇಲಾಖೆಗಳು ಸಂಪರ್ಕದಲ್ಲಿವೆ ಎಂದು ಅದು ಹೇಳಿದೆ.

ಭಾರತೀಯ ವಾಯುಪಡೆಯ ಅತಿ ದೊಡ್ಡ ವಿಮಾನ ಸಿ-17ನ್ನು ವೈದ್ಯಕೀಯ ಪರಿಕರಗಳೊಂದಿಗೆ ಕೊರೋನವೈರಸ್ ಸೋಂಕಿನ ಕೇಂದ್ರಬಿಂದು ವುಹಾನ್ ನಗರಕ್ಕೆ ಕಳುಹಿಸುವುದಾಗಿಯೂ ಹಾಗೂ ವಾಪಸ್ ಬರುವಾಗ ಅಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯರು ಮತ್ತು ನೆರೆಯ ದೇಶಗಳ ನಾಗರಿಕರನ್ನು ಕರೆತರುವುದಾಗಿಯೂ ಭಾರತ ಫೆಬ್ರವರಿ 17ರಂದು ತಿಳಿಸಿತ್ತು.

ವುಹಾನ್‌ಗೆ ಹಾರಲಿರುವ ವಿಶೇಷ ವಿಮಾನವು ಚೀನಾದ ಅನುಮತಿಗಾಗಿ ಕಾಯುತ್ತಿದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News