​ದಕ್ಷಿಣ ಕೊರಿಯಾದಲ್ಲಿ ಮತ್ತೆ 142 ಕೊರೋನಾ ಸೋಂಕು ಪತ್ತೆ

Update: 2020-02-22 04:28 GMT

ಸಿಯೋಲ್: ದಕ್ಷಿಣ ಕೊರಿಯಾದಲ್ಲಿ ಮತ್ತೆ 142 ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 346ನ್ನು ತಲುಪಿದೆ.

ಮತ್ತೋರ್ವ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದು, ಮೃತಪಟ್ಟವರ ಸಂಖ್ಯೆ 2ನ್ನು ತಲುಪಿದಂತಾಗಿದೆ.

ಹೊಸ 142 ಪ್ರಕರಣಗಳ ಪೈಕಿ 92 ಪ್ರಕರಣಗಳು ಚೆಂಡ್ಗೊ ಆಸ್ಪತ್ರೆಯಲ್ಲಿ ಕಂಡುಬಂದಿವೆ ಎಂದು ಕೊರಿಯಾ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರದ ಪ್ರಕಟಣೆ ತಿಳಿಸಿದೆ.

ಚೀನಾದಲ್ಲಿ ಕಳೆದ ಡಿಸೆಂಬರ್‌ನಲ್ಲಿ ಕಾಣಿಸಿಕೊಂಡ ಈ ಮಾರಕ ವೈರಸ್ ಸಾವಿರಾರು ಮಂದಿಯನ್ನು ಬಲಿಪಡೆದಿದ್ದು, 25 ದೇಶಗಳಿಗೆ ಹಬ್ಬಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News