ಇರಾನ್‌ನಲ್ಲಿ ಕೊರೋನ ಕಟ್ಟೆಚ್ಚರ: ಸಾವಿನ ಸಂಖ್ಯೆ 5ಕ್ಕೇರಿಕೆ

Update: 2020-02-23 17:16 GMT

ಇರಾನ್‌, ಫೆ.23: ಮಧ್ಯಪ್ರಾಚ್ಯದ ರಾಷ್ಟ್ರವಾದ ಇರಾನ್‌ನಲ್ಲಿ ಕೊರೊನ ವೈರಸ್ ಹರಡುತ್ತಿದ್ದು, ಈವರೆಗೆ ಒಟ್ಟು ಐವರು ಸಾವನ್ನಪಿದ್ದಾರೆ. ರೋಗ ಹರಡುವುದನ್ನು ತಡೆಯಲು ದೇಶದ 14 ಪ್ರಾಂತಗಳಲ್ಲಿ ಶಾಲೆಗಳು, ವಿಶ್ವವಿದ್ಯಾನಿಲಯಗಳು ಹಾಗೂ ಸಾಂಸ್ಕೃತಿಕ ಕೇಂದ್ರಗಳ ಮುಚ್ಚುಗಡೆಗೆ ಇರಾನ್ ಆದೇಶಿಸಿದೆ. ನೆರೆಯ ರಾಷ್ಟ್ರವಾದ ಇರಾಕ್ , ಇರಾನ್‌ನಿಂದ ಪ್ರಯಾಣಿಕರ ಆಗಮನ ಹಾಗೂ ನಿರ್ಗಮವನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಇತ್ತ ಕುವೈತ್ ಏರ್‌ವೇಸ್ ವಾಯುಯಾನ ಸಂಸ್ಥೆ ಕೂಡಾ ಇರಾನ್‌ಗೆ ತನ್ನ ವಿಮಾಗಳ ಹಾರಾಟವನ್ನು ನಿಷೇಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News