ಕೊರೋನ ಬಗ್ಗೆ ವಿದೇಶಿ ಮಾಧ್ಯಮಗಳಿಂದ ಅಪಪ್ರಚಾರ: ಖಾಮಿನೈ ಆರೋಪ

Update: 2020-02-23 17:29 GMT

ಟೆಹರಾನ್, ಫೆ.23: ವಿದೇಶಿ ಮಾಧ್ಯಮಗಳು ದೇಶದಲ್ಲಿ ತಲೆಯೆತ್ತಿರುವ ಕೊರೊನಾ ವೈರಸ್ ಸೋಂಕಿನ ಭೀತಿಯನ್ನು ಸಾರ್ವತ್ರಿಕ ಚುನಾವಣೆಯಲ್ಲಿ ಮತ ಚಲಾಯಿಸದಂತೆ ನಾಗರಿಕರನ್ನು ಹಿಂಜರಿಯುವಂತೆ ಮಾಡಲು ಬಳಸಿಕೊಂಡಿವೆ ಎಂದು ಇರಾನ್ ಸರ್ವೋಚ್ಚ ನಾಯಕ ಅಯಾತೊಲ್ಲಾ ಅಲಿ ಖಾಮಿನೈ ಆರೋಪಿಸಿದ್ದಾರೆ.

‘‘ಇಂತಹ ನಕಾರಾತ್ಮಕ ಪ್ರಚಾರವು ಎರಡು ತಿಂಗಳ ಮೊದಲೇ ಆರಂಭಗೊಂಡಿತ್ತು. ಹಾಗೂ ಚುನಾವಣೆ ಸಮೀಪಿಸುತ್ತಿರುವಂತೆಯೇ ಅದು ದೊಡ್ಡ ಮಟ್ಟದಲ್ಲಿ ಕಾಣಿಸಿಕೊಂಡಿದೆ ಹಾಗೂ ಕಳೆದ ಎರಡು ದಿನಗಳಲ್ಲಿ ಅನಾರೋಗ್ಯ ಹಾಗೂ ವೈರಸ್‌ನ ನೆಪದಲ್ಲಿ ವಿದೇಸಿ ಮಾಧ್ಯಮಗಳು ಜನರನ್ನು ಮತಚಲಾಯಿಸದಂತೆ ನಿರುತ್ಸಾಹಗೊಳಿಸಲು ಸಣ್ಣ ಅವಕಾಶವನ್ನು ಕೂಡಾ ತಪ್ಪಿಸಿಕೊಳ್ಳುತ್ತಿಲ್ಲ’’ ಎಂದು ಖಾಮಿನೈ ತನ್ನ ಅಧಿಕೃತ ಜಾಲತಾಣದಲ್ಲಿ ತಿಳಿಸಿದ್ದಾರೆ.

‘‘ನಮ್ಮ ಶತ್ರುಗಳು ಇರಾನಿ ಪ್ರಜೆಗಳ ಯಾವುದೇ ಚುನಾವಣೆಯನ್ನು ಕೂಡಾ ವಿರೋಧಿಸುತ್ತಾರೆ’’ಎಂದು ಖಾಮಿನೈ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News