ಗೃಹಬಂಧನದಲ್ಲಿದ್ದ ವಿಯೆಟ್ನಾಮ್ ಬೌದ್ಧಧರ್ಮಗುರು ಥಿಚ್ ಕ್ವಾಂಗ್ ನಿಧನ

Update: 2020-02-23 17:43 GMT

ಹನೋಯಿ (ವಿಯೆಟ್ನಾಮ್), ಫೆ.12: 2003ರಿಂದೀಚೆಗೆ ಗೃಹಬಂಧನದಲ್ಲಿರುವ ಭಿನ್ನಮತೀಯ ಬೌದ್ಧ ಧರ್ಮಗುರು ಥಿಚ್ ಕ್ವಾಂಗ್ ದೊ ಅವರು ಶನಿವಾರ ನಿಧನರಾದರು. ಅವರಿಗೆ 93 ವರ್ಷ ವಯಸ್ಸಾಗಿತ್ತು. ಥಿಚ್ ಕ್ವಾಂಗ್ ಅವರು ಹಲವಾರು ಬಾರಿ ನೊಬೆಲ್ ಶಾಂತಿ ಪುರಸ್ಕಾರಕ್ಕಾಗಿ ನಾಮಕರಣಗೊಂಡಿದ್ದರು.

ನಿಷೇಧಿತ ಬುದ್ಧಿಸ್ಟ್ ಚರ್ಚ್ ಆಫ್ ವಿಯೆಟ್ನಾಮ್ (ಯುಬಿಸಿವಿ)ನ ಮುಖ್ಯಸ್ಥರಾಗಿದ್ದ ಥಿಚ್ ಅವರು 1928ರಲ್ಲಿ ಥಾಯ್ ಭಿನ್ ಪ್ರಾಂತದಲ್ಲಿ ಜನಿಸಿದ್ದರು. ಕಮ್ಯೂನಿಸ್ಟ್ ಆಡಳಿತದ ವಿಯೆಟ್ನಾಮ್‌ನಲ್ಲಿ ಧಾರ್ಮಿಕ ಸ್ವಾತಂತ್ರ ಹಾಗೂ ಮಾನವಹಕ್ಕುಗಳಿಗಾಗಿ ಅವರು ಸತತವಾಗಿ ಹೋರಾಟ ನಡೆಸುತ್ತಲೇ ಬಂದಿದ್ದರು. ಅವರ ಹೋರಾಟ ಸರಕಾರದ ಕೆಂಗಣ್ಣಿಗೆ ಕಾರಣವಾಗಿ 2003ರಲ್ಲಿ ಅವರನ್ನು ಹೊ ಚಿ ಮಿನ್ ನಗರದಲ್ಲಿ ಗೃಹಬಂಧನದಲ್ಲಿರಿಸಲಾಗಿತ್ತು.

ಪ್ರಜಾಪ್ರಭುತ್ವಕ್ಕಾಗಿ ಪ್ರಬಲವಾಗಿ ಧ್ವನಿಯೆತ್ತಿದ್ದ ಥಿಚ್ ಕ್ವಾಂಗ್ ಅವರು ಹಲವಾರು ಬಾರಿ ನೊಬೆಲ್ ಶಾಂತಿ ಪುರಸ್ಕಾರಕ್ಕಾಗಿ ನಾಮಕರಣಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News