ಟರ್ಕಿ: ಪ್ರಬಲ ಭೂಕಂಪಕ್ಕೆ ಎಂಟು ಬಲಿ

Update: 2020-02-23 17:44 GMT

ಅಂಕಾರ, ಫೆ.23: ಪಶ್ಚಿಮ ಇರಾನ್ ಹಾಗೂ ಟರ್ಕಿಯಲ್ಲಿ ರವಿವಾರ ಮುಂಜಾನೆ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 5.7 ತೀವ್ರತೆಯನ್ನು ದಾಖಲಿಸಿರುವ ಈ ಭೂಕಂಪದಿಂದಾಗಿ ಟರ್ಕಿಯಲ್ಲಿ ನಾಲ್ವರು ಮಕ್ಕಳು ಸೇರಿದಂತೆ ಎಂಟು ಮಂದಿ ಸಾವನ್ನಪ್ಪಿದ್ದಾರೆಂದು ಟರ್ಕಿಯ ಗೃಹ ಸಚಿವ ಸುಲೈಮಾನ್ ಸೊಯ್ಲು ತಿಳಿಸಿದ್ದಾರೆ.

ಭೂಕಂಪದ ಕೇಂದ್ರಬಿಂದು ಇರಾನ್‌ನ ಕೊಯ್ ನಗದ ಪಶ್ಚಿಮದಲ್ಲಿ ಕೇಂದ್ರೀತವಾಗಿತ್ತು ಎಂದು ಅವರು ಹೇಳಿದ್ದಾರೆ. ಟರ್ಕಿಯ ವಾನ್ ಪ್ರಾಂತವು ಭೂಕಂಪದಿಂದಾಗಿ ಹಾನಿಗೀಡಾಗಿದೆಯೆಂದು ಅವರು ಹೇಳಿದರು. ಭೂಕಂಪದಲ್ಲಿ 21 ಮಂದಿ ಗಾಯಗೊಂಡಿದ್ದು, ಅವರಲ್ಲಿ ಎಂಟು ಮಂದಿಯ ಸ್ಥಿತಿ ಗಂಭೀರವಾಗಿದೆಯೆಂದು ಸೊಯ್ಲು ತಿಳಿಸಿದ್ದಾರೆ.

ಇರಾನ್‌ನ ಅಧಿಕೃತ ಸುದ್ದಿಸಂಸ್ಥೆ ಇರ್ನಾ, ಭೂಕಂಪದಿಂದಾಗಿ ದೇಶದ ಪರ್ವತಾವೃತ ಪ್ರದೇಶವಾದ ಕ್ವೊಟೂರ್‌ನಲ್ಲಿರುವ 43 ಗ್ರಾಮಗಳು ಹಾನಿಗೀಡಾಗಿವೆಯೆಂದು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News