ಡೆಮಾಕ್ರಾಟ್ ಅಭ್ಯರ್ಥಿ ಚುನಾವಣೆ: ಸ್ಯಾಂಡರ್ಸ್ ಮೇಲುಗೈ

Update: 2020-02-23 17:46 GMT

ಲಾಸ್‌ವೇಗಾಸ್, ಫೆ.23: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಾಟಿಕ್ ಅಭ್ಯರ್ಥಿಯ ಆಯ್ಕೆಗಾಗಿ ಶನಿವಾರ ನಡೆದ ಚುನಾವಣೆಯಲ್ಲಿ ಪ್ರಗತಿಪರ ಧೋರಣೆಯ ನಾಯಕ ಬೆರ್ನಿ ಸ್ಯಾಂಡರ್ಸ್ ನಿರ್ಣಾಯಕ ಗೆಲುವನ್ನು ಸಾಧಿಸಿದ್ದಾರೆ.

ವೆರ್ಮಂಟ್ ಕ್ಷೇತ್ರದ ಸೆನೆಟರ್ ಆಗಿರುವ 78 ವರ್ಷ ವಯಸ್ಸಿನ ಬರ್ನಿ ಸ್ಯಾಂಡರ್ಸ್ ಅವರು 44.7 ಶೇಕಡ ಮತಗಳನ್ನು ಪಡೆದಿದ್ದು, ಅವರ ನಿಕಟ ಪ್ರತಿಸ್ಪರ್ಧಿ, ಅಮೆರಿಕದ ಮಾಜಿ ಉಪಾಧ್ಯಕ್ಷ 19.5 ಶೇಕಡ ಮತಗಳನ್ನು ಪಡೆದಿದ್ದಾರೆ ಇನ್ನೋರ್ವ ಅಭ್ಯರ್ಥಿಪೀಟೆ ಬುಟಿಗಿಯೆಗ್ 15.6 ಶೇಕಡ ಮತಗಳನ್ನು ಪಡೆದಿದ್ದರೆ, ಸೆನೆಟರ್ ಎಲಿಜಬೆತ್ ವಾರೆನ್ ಅವರು ಶೇ.11.8 ಮತಗಳನ್ನು ಪಡೆದಿದ್ದಾರೆ ಹಾಗೂ ಸೆನೆಟರ್ ಆ್ಯಮಿ ಕ್ಲೊಬುಚಾರ್ 4.3 ಶೇಕಡ ಮತಗಳನ್ನು ಗಳಿಸಿದ್ದಾರೆ.

ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ವಿರುದ್ಧ ಸ್ಪರ್ಧೆಗಿಳಿಸುವ ಡೆಮಾಕ್ರಾಟಿಕ್ ಪಕ್ಷದ ಅಭ್ಯರ್ಥಿಯ ಆಯ್ಕೆಗಾಗಿ ಈ ಚುನಾವಣೆ ನಡೆಯುತ್ತಿದೆ.

ಬರ್ನಿ ಸ್ಯಾಂಡರ್ಸ್ ಅವರು ಲೋವಾ, ನ್ಯೂಹ್ಯಾಂಪ್‌ಶೈರ್ ಪ್ರೈಮರಿಯಲ್ಲಿ ನಡೆದ ಚುನಾವಣೆಗಳಲ್ಲೂ ವಿಜಯಗಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News