ಟ್ವೆಂಟಿ-20 ವನಿತೆಯರ ವಿಶ್ವಕಪ್: ಭಾರತ ಸೆಮಿಫೈನಲ್ ಗೆ

Update: 2020-02-27 15:29 GMT

ಮೆಲ್ಬೋರ್ನ್ , ಫೆ.27: ಮಹಿಳೆಯರ ಟ್ವೆಂಟಿ-20 ವಿಶ್ವಕಪ್ ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ 3ರನ್ ಗಳ ರೋಚಕ ಜಯ ಗಳಿಸಿದ ಭಾರತದ ವನಿತೆಯರ ತಂಡ ಸೆಮಿಫೈನಲ್ ಪ್ರವೇಶಿಸಿದೆ.

ಹಾಲಿ ಚಾಂಪಿಯನ್ ಆಸ್ಟ್ರೇಲಿಯ, ಬಾಂಗ್ಲಾದೇಶ ಮತ್ತು ನ್ಯೂಝಿಲ್ಯಾಂಡ್ ನ್ನು ಮಣಿಸಿದ ಭಾರತದ ವನಿತೆಯರ ತಂಡ ಹ್ಯಾಟ್ರಿಕ್ ಗೆಲುವಿನೊಂದಿಗೆ ಸೆಮಿಫೈನಲ್ ನಲ್ಲಿ ಅವಕಾಶ ದೃಡಪಡಿಸಿದೆ.

ಇಂದು ಗೆಲುವಿಗೆ 134 ರನ್ ಗಳ ಸವಾಲನ್ನು ಪಡೆದ ನ್ಯೂಝಿಲ್ಯಾಂಡ್ ತಂಡ ನಿಗದಿತ 20  ಓವರ್ ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 130 ರನ್ ಗಳಿಸಿತು.

ಇದಕ್ಕೂ ಮೊದಲು ಭಾರತ 8 ವಿಕೆಟ್ ನಷ್ಟದಲ್ಲಿ 133 ರನ್ ಗಳಿಸಿತ್ತು. ತಂಡದ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ 46 ರನ್, ತಾನಿಯಾ ಭಾಟಿಯಾ 23  ರನ್ ಗಳಿಸಿದರು.

ನ್ಯೂಝಿಲ್ಯಾಂಡ್ ತಂಡದ ಅಮೆಲಿಯಾ ಕೇರ್ (ಔಟಾಗದೆ 34) ಗರಿಷ್ಠ ಸ್ಕೋರ್ ದಾಖಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News