ಮಿಡತೆಗಳನ್ನು ಎದುರಿಸಲು ಪಾಕ್‌ಗೆ ಚೀನಾದಿಂದ ಬಾತುಕೋಳಿಗಳ ಪಡೆ

Update: 2020-02-27 17:38 GMT

ಬೀಜಿಂಗ್, ಫೆ. 27: ಪಾಕಿಸ್ತಾನದಲ್ಲಿ ಬೆಳೆಗಳನ್ನು ತಿನ್ನುತ್ತಿರುವ ಅಗಾಧ ಪ್ರಮಾಣದ ಮರುಭೂಮಿ ಮಿಡತೆಗಳನ್ನು ಸದೆಬಡಿಯುವುದಕ್ಕಾಗಿ ಚೀನಾವು ಬಾತುಕೋಳಿಗಳ ಬೃಹತ್ ಪಡೆಯೊಂದನ್ನು ಕಳುಹಿಸಲಿದೆ.

ಮಿಡತೆಗಳ ವಿರುದ್ಧ ಹೋರಾಡಲು ಕನಿಷ್ಠ ಒಂದು ಲಕ್ಷ ಬಾತುಕೋಳಿಗಳನ್ನು ಈ ವರ್ಷದ ದ್ವಿತೀಯಾರ್ಧದಲ್ಲಿ ಪಾಕಿಸ್ತಾನಕ್ಕೆ ಕಳುಹಿಸಿಕೊಡಲಾಗುವುದು ಎಂದು ಝೆಜಿಯಾಂಗ್ ಅಕಾಡಮಿ ಆಫ್ ಅಗ್ರಿಕಲ್ಚರಲ್ ಸಯನ್ಸಸ್‌ನ ಹಿರಿಯ ಸಂಶೋಧಕ ಲು ಲಿಝಿ ಹೇಳಿದ್ದಾರೆ.

ಬಾತುಕೋಳಿಗಳು ‘ಜೈವಿಕ ಆಯುಧ’ಗಳಾಗಿದ್ದು, ಕೀಟನಾಶಕಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಬಲ್ಲವು ಎಂದು ಲು ಹೇಳಿದರು. ಅವರು ಪಾಕಿಸ್ತಾನದ ವಿಶ್ವವಿದ್ಯಾಲಯವೊಂದರ ಸಹಭಾಗಿತ್ವದಲ್ಲಿ ಈ ಯೋಜನೆಯ ಉಸ್ತುವಾರಿಯನ್ನು ಹೊತ್ತಿದ್ದಾರೆ.

ಮರುಭೂಮಿಯ ಮಿಡತೆಗಳು ಪೂರ್ವ ಆಫ್ರಿಕದಿಂದ ದಕ್ಷಿಣ ಏಶ್ಯಕ್ಕೆ ಹರಡಿದ್ದು, ಬೆಳೆಗಳು ಮತ್ತು ಹಸಿರನ್ನು ಕಬಳಿಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News