×
Ad

ಭೂಮಿಯನ್ನು ಸುತ್ತುತ್ತಿರುವ ಎರಡನೇ ಚಂದ್ರ?

Update: 2020-02-27 23:10 IST

ನ್ಯೂಯಾರ್ಕ್, ಫೆ. 27: ಕಾರು ಗಾತ್ರದ ಇನ್ನೊಂದು ನೈಸರ್ಗಿಕ ಉಪಗ್ರಹವೊಂದು ಮೂರು ವರ್ಷಗಳಿಂದ ಭೂಮಿಯನ್ನು ಸುತ್ತುತ್ತಿದೆ ಎಂಬುದನ್ನು ಖಗೋಳ ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.

‘ಮಿನಿ ಮೂನ್’ (ಕಿರು ಚಂದ್ರ) ಎಂಬುದಾಗಿ ಕರೆಯಲ್ಪಡುವ ಈ ಉಪಗ್ರಹವು ಭೂಮಿಯ ಸುತ್ತ ತಾತ್ಕಾಲಿಕವಾಗಿ ಸುತ್ತುತ್ತದೆ.

‘‘ಭೂಮಿಯು ‘2020 ಸಿಡಿ3’ ಎಂಬ ಕಿರು ಚಂದ್ರನನ್ನು ಪಡೆದುಕೊಂಡಿದೆ. ಫೆಬ್ರವರಿ 15ರ ರಾತ್ರಿ, ‘ಕ್ಯಾಟಲಿನ ಸ್ಕೈ ಸರ್ವೇ’ ತಂಡದ ನನ್ನ ಜೊತೆಗಾರ ಟೆಡ್ಡಿ ಪ್ರಯ್ನಿ ಮತ್ತು ನಾನು ಇದನ್ನು ಪತ್ತೆಹಚ್ಚಿದ್ದೇವೆ’’ ಎಂದು ಅರಿರೆನ ವಿಶ್ವವಿದ್ಯಾನಿಲಯದ ಲೂನಾರ್ ಆ್ಯಂಡ್ ಪ್ಲಾನೆಟರಿ ಲ್ಯಾಬ್‌ನಲ್ಲಿರುವ ಕ್ಯಾಟಲೀನ ಸ್ಕೈ ಸರ್ವೇಯಲ್ಲಿ ಸಂಶೋಧಕರಾಗಿರುವ ಕ್ಯಾಕ್ಪರ್ ವಿಯರ್‌ಕೋಸ್ ಟ್ವೀಟ್ ಮಾಡಿದ್ದಾರೆ.

 ‘‘ಇಂಥ ಸಣ್ಣ ಆಕಾಯ ಕಾಯಗಳು ಬರುತ್ತವೆ ಮತ್ತು ಹೋಗುತ್ತವೆ ಹಾಗೂ ಹೊಸದಾಗಿ ಪತ್ತೆಯಾಗಿರುವ ಈ ಆಕಾಶ ಕಾಯವು ಬಹುರ್ಷ ಈಗಾಗಲೇ ತನ್ನ ಕೊನೆಯ ಆವರ್ತನದಲ್ಲಿರಬಹುದು’’ ಎಂದು ಬ್ರಿಟನ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಡೇವಿಡ್ ರಾದರಿ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News