ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್ ಗೆ ಜಯ

Update: 2020-02-28 17:38 GMT

ಮೆಲ್ಬೋರ್ನ್, ಫೆ.28: ಮಹಿಳೆಯರ ಟ್ವೆಂಟಿ-20 ವಿಶ್ವಕಪ್ ಟೂರ್ನಮೆಂಟ್‌ನಲ್ಲಿ ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್ 42 ರನ್‌ಗಳ ಜಯ ಗಳಿಸಿದೆ.

 ನಾಯಕಿ ಹೀದರ್ ನೈಟ್ ಅವರು ಮತ್ತೊಮ್ಮೆ ನೀಡಿದ ಆಕರ್ಷಕ ಬ್ಯಾಟಿಂಗ್ ನೆರವಿನಲ್ಲಿ ಇಂಗ್ಲೆಂಡ್ 7 ವಿಕೆಟ್ ನಷ್ಟದಲ್ಲಿ 158 ರನ್ ಗಳಿಸಿತ್ತು.

ನೈಟ್ ಕ್ಯಾನ್‌ಬೆರ್ರಾದಲ್ಲಿ ದಾಖಲಿಸಿದ ಆರನೇ ಅರ್ಧಶತಕದ ನೆರವಿನಲ್ಲಿ ಇಂಗ್ಲೆಂಡ್ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತ್ತು.

  ನೈಟ್ 47 ಎಸೆತಗಳಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಲ್ಲಿ 62 ರನ್ ಸಿಡಿಸಿದರು. ಪಾಕ್ ಪರ ನೂರನೇ ಟ್ವೆಂಟಿ-20 ಪಂದ್ಯವನ್ನಾಡುತ್ತಿರುವ ನಿದಾ ದಾರ್ ಎಸೆತದಲ್ಲಿ ನೈಟ್ ಔಟಾದರು.

 ನಥಾಲಿಯಾ ಸೀವೆರ್ 36 ರನ್ ಮತ್ತು ಫ್ರಾನ್ ವಿಲ್ಸನ್ 22 ರನ್ ಗಳಿಸಿದರು.ಐಮಾನ್ ಅನ್ವೆರ್ 30ಕ್ಕೆ 3, ನಿದಾ ದಾರ್ 43ಕ್ಕೆ 2, ದಿಯಾನಾ ಬೇಗ್ ಮತ್ತು ಅಲಿಯಾ ರಿಯಾಝ್ ತಲಾ 1 ವಿಕೆಟ್ ಪಡೆದರು.

 ಗೆಲುವಿಗೆ 159 ರನ್ ಗಳಿಸಬೇಕಿದ್ದ ಪಾಕಿಸ್ತಾನ ತಂಡ 116 ರನ್‌ಗಳಿಗೆ ಆಲೌಟಾಗಿದೆ. ಪಾಕಿಸ್ತಾನ ಮೂರನೇ ಓವರ್‌ನಲ್ಲಿ ಮುನೀಬಾ ಅಲಿ ಅವರನ್ನು ಕಳೆದುಕೊಂಡಿತ್ತು. 51 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡ ಪಾಕಿಸ್ತಾನ 116 ರನ್ ಸೇರಿಸುವಷ್ಟರಲ್ಲಿ ಆಲೌಟಾಗಿದೆ.

ಪಾಕಿಸ್ತಾನ ತಂಡದ ಅಲಿಯಾ ರಿಯಾಝ್ (41 ) ತಂಡದ ಪರ ಗರಿಷ್ಠ ಸ್ಕೋರ್ ದಾಖಲಿಸಿದರು. ಮುನೀಬಾ ಅಲಿ(10) ಮತ್ತು ಜವೇರಿಯಾ ಖಾನ್(16) ಎರಡಂಕೆಯ ಸ್ಕೋರ್ ದಾಖಲಿಸಿದರು. ತಂಡದ ಉಳಿದ ಆಟಗಾರ್ತಿಯರು ಕಳಪೆ ಪ್ರದರ್ಶನ ನೀಡಿದರು. ಇಂಗ್ಲೆಂಡ್‌ನ ಅನಯಾ ಶ್ರುಬ್ಸೋಲೆ(25ಕ್ಕೆ 3), ಸಾರಾ ಗ್ಲೆನ್(15ಕ್ಕೆ 3), ಕ್ಯಾಟ್ರಿನಾ ಬ್ರಂಟ್ (32ಕ್ಕೆ 2) ಮತ್ತು ಸೋಫಿ ಎಕ್ಲೇಸ್ಟೋನ್ (12ಕ್ಕೆ 2) ದಾಳಿಗೆ ಸಿಲುಕಿದ ಪಾಕಿಸ್ತಾನ ತಂಡ 19.4 ಓವರ್‌ಗಳಲ್ಲಿ ಆಲೌಟಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News