ಚೀನಾದ ಒಲಿಂಪಿಕ್ಸ್ ಈಜು ಚಾಂಪಿಯನ್ ಸನ್ ಯಂಗ್‌ಗೆ 8 ವರ್ಷ ನಿಷೇಧ

Update: 2020-02-28 17:42 GMT

ಲಾಸಾನ್, ಫೆ. 28: ಚೀನಾದ ವಿಶ್ವ ಹಾಗೂ ಒಲಿಂಪಿಕ್ಸ್‌ನ ಸ್ವಿಮ್ಮಿಂಗ್ ಚಾಂಪಿಯನ್ ಸನ್ ಯಂಗ್‌ಗೆ ಶುಕ್ರವಾರ 8 ವರ್ಷಗಳ ಕಾಲ ನಿಷೇಧ ಹೇರಲಾಗಿದೆ. ಈ ಹಿನ್ನೆಲೆಯಲ್ಲಿ ಅವರು ಮುಂದಿನ ವರ್ಷ ನಡೆಯಲಿರುವ ಟೋಕಿಯೊ ಒಲಿಂಪಿಕ್ಸ್ ನಿಂದ ಹೊರಗುಳಿದಿದ್ದಾರೆ.

ಸ್ಪರ್ಧೆಗಳಿಲ್ಲದ ಸಮಯದಲ್ಲಿ ನಡೆಯುವ ಡೋಪಿಂಗ್ ಪರೀಕ್ಷೆಯನ್ನು ಪದೇ ಪದೇ ತಪ್ಪಿಸಿಕೊಂಡ ಕಾರಣಕ್ಕೆ ಯಂಗ್ ನಿಷೇಧಕ್ಕೆ ಗುರಿಯಾಗಿದ್ದಾರೆ. 2018ರ ಸೆಪ್ಟಂಬರ್‌ನಲ್ಲಿ ಡೋಪಿಂಗ್ ಪರೀಕ್ಷೆಯ ವೇಳೆ ತಪ್ಪು ಮಾಡಿದ್ದ ಸನ್‌ಗೆ ಸ್ವಿಮ್ಮಿಂಗ್ ಆಡಳಿತ ಮಂಡಳಿ ಫಿನಾ ಕ್ಲೀನ್‌ಚಿಟ್ ನೀಡಿತ್ತು. ಇದನ್ನು ಪ್ರಶ್ನಿಸಿ ವಿಶ್ವ ಉದ್ದೀಪನ ಮದ್ದು ನಿಗ್ರಹ ಘಟಕ(ವಾಡಾ)ಕ್ರೀಡೆಗಾಗಿ ಇರುವ ಮಧ್ಯಸ್ಥಿಕೆ ನ್ಯಾಯಾಲಯದ ಮೊರೆ ಹೋಗಿತ್ತು. ನ್ಯಾಯಾಲಯ ವಾಡಾದ ಮೇಲ್ಮನವಿಯನ್ನು ಪುರಸ್ಕರಿಸಿದ ಸನ್ ಯಂಗ್‌ಗೆ ಶಿಕ್ಷೆ ವಿಧಿಸಿದೆ. 28ರ ಹರೆಯದ ಚೀನಾದ ಅಗ್ರಮಾನ್ಯ ಸ್ವಿಮ್ಮರ್ 2012ರ ಲಂಡನ್ ಒಲಿಂಪಿಕ್ಸ್ ನಲ್ಲಿ ಎರಡು ಚಿನ್ನ ಜಯಿಸಿದ್ದರು. 2016ರಲ್ಲಿ ರಿಯೋ ಡಿಜನೈರೊದಲ್ಲಿ ಮತ್ತೊಮ್ಮೆ ಚಿನ್ನದ ಪದಕ ಗೆದ್ದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News