ಏಶ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಚೀನಾದಿಂದ ಸ್ಥಳಾಂತರ

Update: 2020-03-04 17:52 GMT

ಹೈದರಾಬಾದ್,ಮಾ.4: ಏಶ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ್ನು ಬ್ಯಾಡ್ಮಿಂಟನ್ ಏಶ್ಯ(ಬಿಎ)ಚೀನಾದ ವುಹಾನ್‌ನಿಂದ ಮನಿಲಾಕ್ಕೆ ಸ್ಥಳಾಂತರಗೊಳಿಸಿದೆ. 2020ರ ಟೋಕಿಯೊ ಒಲಿಂಪಿಕ್ಸ್ ಗಾಗಿ ಅಂಕ ಗಳಿಸಲು ಪರದಾಡುತ್ತಿರುವ ಸೈನಾ ನೆಹ್ವಾಲ್ ಹಾಗೂ ಕಿಡಂಬಿ ಶ್ರೀಕಾಂತ್‌ಈ ಬೆಳವಣಿಗೆಯಿಂದ ನಿಟ್ಟಿಸಿರು ಬಿಟ್ಟಿದ್ದಾರೆ.

ಏಶ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳಲು ಇರುವ ಕೊನೆಯ ಟೂರ್ನಿಯಾಗಿದೆ. ಇದು ವುಹಾನ್‌ನಲ್ಲಿ ಎಪ್ರಿಲ್ 21ರಿಂದ 26ರ ತನಕ ನಿಗದಿಯಾಗಿತ್ತು. ಇದೀಗ ಟೂರ್ನಿಯು ಮನಿಲಾಕ್ಕೆ ಸ್ಥಳಾಂತರವಾಗಿದೆ.

ಚೀನಾದ ವುಹಾನ್‌ನಲ್ಲಿ ಎ.21ರಿಂದ 26ರ ತನಕ ನಡೆಯಬೇಕಾಗಿದ್ದ ಏಶ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ್ನು ಫಿಲಿಪ್ಪೈನ್ಸ್‌ನ ಮನಿಲಾಕ್ಕೆ ಸ್ಥಳಾಂತರಗೊಳಿಸುತ್ತೇವೆ ಎಂದು ಅಧಿಕೃತವಾಗಿ ಘೋಷಿಸಲು ಬಯಸುತ್ತಿದ್ದೇವೆ. ಪ್ರಮುಖ ಹಾಗೂ ಪ್ರತಿಷ್ಠಿತ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವ ಆಟಗಾರರು ಹಾಗೂ ಅಧಿಕಾರಿಗಳಿಗೆ ವೀಸಾ ಅಂಗೀಕಾರವಾಗುವುದನ್ನು ಖಚಿತಪಡಿಸುವ ನಿಟ್ಟಿನಲ್ಲಿ ಫಿಲಿಪ್ಪೈನ್ಸ್ ಬ್ಯಾಡ್ಮಿಂಟನ್ ಸಂಸ್ಥೆ ಕಾರ್ಯಪ್ರವೃತ್ತವಾಗಿದೆ ಎಂದು ಪತ್ರಿಕಾ ಪ್ರಕಟನೆಯೊಂದರಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News