ಕ್ವಾರ್ಟರ್ ಫೈನಲ್‌ಗೆ ಸಾಕ್ಷಿ ಚೌಧರಿ
Update: 2020-03-04 23:29 IST
ಅಮ್ಮಾನ್(ಜೋರ್ಡನ್), ಮಾ.4: ಥಾಯ್ಲೆಂಡ್‌ನ ನಾಲ್ಕನೇ ಶ್ರೇಯಾಂಕದ ನೀಲಾವನ್‌ರನ್ನು ಮಣಿಸಿದ ಮಾಜಿ ಜೂನಿಯರ್ ಚಾಂಪಿಯನ್ ಸಾಕ್ಷಿ ಚೌಧರಿ(57ಕೆಜಿ)ಬಾಕ್ಸಿಂಗ್ ಏಶ್ಯನ್ ಒಲಿಂಪಿಕ್ಸ್ ಕ್ವಾಲಿಫೈಯರ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಎರಡು ಬಾರಿ ಯೂತ್ ಹಾಗೂ ವಿಶ್ವ ಚಾಂಪಿಯನ್ ಆಗಿರುವ 19ರ ಹರೆಯದ ಸಾಕ್ಷಿ ಏಶ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ವಿಜೇತ ಬಾಕ್ಸರ್ ನೀಲಾವನ್‌ರನ್ನು ಮಣಿಸಿದರು. ಸಾಕ್ಷಿ ಮಾ.9ರಂದು ನಡೆಯುವ ಕ್ವಾರ್ಟರ್ ಫೈನಲ್‌ನಲ್ಲಿ ಕೊರಿಯಾದ ಐಮ್ ಏಜಿ ಅವರನ್ನು ಎದುರಿಸಲಿದ್ದಾರೆ.
ಸೆಮಿ ಫೈನಲ್ ತಲುಪುವ ಬಾಕ್ಸರ್‌ಗಳು ಈ ವರ್ಷದ ಜುಲೈ-ಆಗಸ್ಟ್‌ನಲ್ಲಿ ನಡೆಯಲಿರುವ ಟೋಕಿಯೊ ಒಲಿಂಪಿಕ್ಸ್‌ಗೆ ತಮ್ಮ ಸ್ಥಾನ ಖಚಿತಪಡಿಸಲಿದ್ದಾರೆ. ಮಂಗಳವಾರ ಭಾರತದ ಖ್ಯಾತ ಬಾಕ್ಸರ್‌ಗಳಾದ ಗೌರವ್ ಸೋಳಂಕಿ(57ಕೆಜಿ) ಹಾಗೂ ಆಶೀಷ್ ಕುಮಾರ್(75ಕೆಜಿ)ಪುರುಷರ ವಿಭಾಗದಲ್ಲಿ ಪ್ರಿ-ಕ್ವಾರ್ಟರ್ ಫೈನಲ್ ತಲುಪಿದ್ದರು.