ಕೊರೋನ ವೈರಸ್ ಪರಿಣಾಮ: ಏಶ್ಯಕಪ್‌ನಿಂದ ಹೊರ ನಡೆದ ಭಾರತೀಯ ಆರ್ಚರಿ ತಂಡ
Update: 2020-03-06 18:16 IST
ಕೋಲ್ಕತಾ,ಮಾ.5: ಕೊರೋನ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಬ್ಯಾಂಕಾಕ್‌ನಲ್ಲಿ ನಡೆಯಲಿರುವ ಮುಂಬರುವ ಏಶ್ಯ ಕಪ್ ವರ್ಲ್ಡ್ ರ್ಯಾಂಕಿಂಗ್ ಟೂರ್ನಮೆಂಟ್‌ನಿಂದ ತನ್ನ ತಂಡವನ್ನು ಹಿಂದಕ್ಕೆ ಕರೆಸಿಕೊಳ್ಳಲು ಭಾರತದ ಆರ್ಚರಿ ಸಂಸ್ಥೆ(ಎಎಐ)ನಿರ್ಧರಿಸಿದೆ.
ವರ್ಷದ ಮೊದಲ ಹಂತದ ಟೂರ್ನಮೆಂಟ್ ಥಾಯ್ಲೆಂಡ್‌ನ ರಾಜಧಾನಿಯಲ್ಲಿ ಮಾ.8ರಿಂದ 15ರ ತನಕ ನಿಗದಿಯಾಗಿದೆ.
ಐದು ತಿಂಗಳ ಅಮಾನತಿನಿಂದ ವಾಪಸಾದ ಬಳಿಕ ಭಾರತ ಸ್ಪರ್ಧಿಸುತ್ತಿರುವ ಮೊದಲ ಅಂತರ್‌ರಾಷ್ಟ್ರೀಯ ಪಂದ್ಯಾವಳಿ ಇದಾಗಿತ್ತು.
ಭಾರತ ಟೂರ್ನಮೆಂಟ್‌ಗೆ ತಂಡವನ್ನು ಕಳುಹಿಸಿಕೊಡಬೇಕಾಗಿತ್ತು. ಎಲ್ಲ ಟಿಕೆಟ್‌ಗಳನ್ನು ಬುಕ್ಕಿಂಗ್ ಮಾಡುವುದರೊಂದಿಗೆ ವ್ಯವಸ್ಥೆ ಮಾಡಲಾಗಿತ್ತು. ಬುಧವಾರ ಸಂಜೆ ಕ್ರೀಡಾ ಪ್ರಾಧಿಕಾರದ ಸಲಹೆ ಬಳಿಕ ಟೂರ್ನಿಯಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಳ್ಳಲಾಗಿದೆ.