ಆಶೀಷ್ ಕುಮಾರ್ ಕ್ವಾರ್ಟರ್ ಫೈನಲ್‌ಗೆ ಲಗ್ಗೆ
Update: 2020-03-06 18:17 IST
ಅಮ್ಮಾನ್(ಜೋರ್ಡನ್), ಮಾ.5: ಏಶ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತ ಆಶೀಷ್ ಕುಮಾರ್(75ಕೆಜಿ)ನಾಲ್ಕನೇ ಶ್ರೇಯಾಂಕದ ಕಿರ್ಗಿಝ್ ಒಮುರ್ಬೆಕ್‌ರನ್ನು ಮಣಿಸಿ ಕ್ವಾರ್ಟರ್ ಫೈನಲ್‌ಗೆ ತೇರ್ಗಡೆಯಾದರು.
ಇಲ್ಲಿ ಗುರುವಾರ ಏಕಪಕ್ಷೀಯ ವಾಗಿ ಸಾಗಿದ ಅಂತಿಮ-16ರ ಸುತ್ತಿನ ಸ್ಪರ್ಧೆಯಲ್ಲಿ ಆಶೀಷ್ 5-0 ಅಂತರದಿಂದ ಜಯಶಾಲಿಯಾದರು. ಮುಂದಿನ ಸುತ್ತಿನಲ್ಲಿ ಇಂಡೋನೇಶ್ಯದ ಮೈಖೆಲ್ ರೊಬರ್ಡ್ ಮುಸ್ಕಿತಾರನ್ನು ಎದುರಿಸಲಿದ್ದಾರೆ. ಆಶೀಷ್ ಸೆಮಿ ಫೈನಲ್ ತಲುಪಲು ಸಫಲರಾದರೆ ಈ ವರ್ಷದ ಜುಲೈ-ಆಗಸ್ಟ್‌ನಲ್ಲಿ ನಿಗದಿಯಾಗಿರುವ ಒಲಿಂಪಿಕ್ ಗೇಮ್ಸ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳಲಿದ್ದಾರೆ. ಬುಧವಾರ ನಡೆದ ಸ್ಪರ್ಧೆಯಲ್ಲಿ ಮಹಿಳಾ ಬಾಕ್ಸರ್‌ಗಳಾದ ಸಿಮ್ರಾನ್‌ಜೀತ್ ಕೌರ್(60ಕೆಜಿ) ಹಾಗೂ ಸಾಕ್ಷಿ ಚೌಧರಿ(57ಕೆಜಿ)ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು.