ಪ್ರಾಚಿ ಚೌಧರಿ ಅಮಾನತು
ಹೊಸದಿಲ್ಲಿ, ಮಾ.5: ತನ್ನನ್ನು 2018ರ ಜಕಾರ್ತ ಏಶ್ಯನ್ ಗೇಮ್ಸ್‌ನಲ್ಲಿ ಭಾರತ ತಂಡಕ್ಕೆ ಸೇರಿಸಿಕೊಂಡಿಲ್ಲ ಎಂಬ ಕಾರಣಕ್ಕೆ ಭಾರತ ಅಥ್ಲೆಟಿಕ್ಸ್ ಒಕ್ಕೂಟ(ಎಎಫ್‌ಐ)ವನ್ನು ಸುಪ್ರೀಂಕೋರ್ಟ್‌ಗೆ ಎಳೆದಿದ್ದ ಮಧ್ಯಮ ಅಂತರದ ಓಟಗಾರ್ತಿ ಪ್ರಾಚಿ ಚೌಧರಿ ಡೋಪಿಂಗ್ ಪರೀಕ್ಷೆ ಯಲ್ಲಿ ಅನುತ್ತೀರ್ಣರಾಗಿದ್ದು, ಅವರನ್ನು ರಾಷ್ಟ್ರೀಯ ಉದ್ದೀಪನ ಮದ್ದು ನಿಗ್ರಹ ಘಟಕ (ನಾಡಾ)ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ.
400 ಮೀ.ಓಟದ ಸ್ಪೆಷಲಿಸ್ಟ್ ಪ್ರಾಚಿಯವರನ್ನು ಪಟಿಯಾಲದ ನೇತಾಜಿ ಸುಭಾಶ್ವಂದ್ರ ರಾಷ್ಟ್ರೀಯ ಕ್ರೀಡಾ ಕೇಂದ್ರ ಸಂಸ್ಥೆಯಲ್ಲಿ ನಾಡಾದ ಡೋಪ್ ನಿಯಂತ್ರಣಾಧಿಕಾರಿಗಳು ಡಿ.30ರಂದು ಪರೀಕ್ಷೆ ನಡೆಸಿದ್ದರು. ಕತರ್ ಟೆಸ್ಟಿಂಗ್ ಲ್ಯಾಬ್‌ನಲ್ಲಿ ಪ್ರಾಚಿಯವರ ಮೂತ್ರ ಸ್ಯಾಂಪಲ್ ಪಾಸಿಟಿವ್ ಆಗಿತ್ತು. ಈ ಹಿನ್ನೆಲೆಯಲ್ಲಿ ಪ್ರಾಚಿ ಅವರನ್ನು ತಾತ್ಕಾಲಿಕವಾಗಿ ಅಮಾನತು ಗೊಳಿಸಿದ ಶಿಸ್ತು ಸಮಿತಿಯು ವಿಚಾರಣೆಯನ್ನು ಬಾಕಿ ಇರಿಸಿದೆ.
ಅಮಾನತಿನ ಅವಧಿಯಲ್ಲಿ ಪ್ರಾಚಿ ಟೋಕಿಯೊ ಒಲಿಂಪಿಕ್ಸ್‌ನ ಯಾವುದೇ ಅರ್ಹತಾ ಕ್ರೀಡಾಕೂಟಗಳಲ್ಲಿ ಹಾಗೂ ಭಾರತದ ಅಥ್ಲೆಟಿಕ್ಸ್ ಒಕ್ಕೂಟ ಮಾನ್ಯತೆ ಇರುವ ಸ್ಪರ್ಧೆಗಳಲ್ಲಿ ಭಾಗವಹಿಸಲು ಸಾಧ್ಯವಿಲ್ಲ.