ಮಹಿಳೆಯರ ಟಿ-20 ವಿಶ್ವಕಪ್ ಫೈನಲ್ : ಸೋಲಿನ ಸುಳಿಯಲ್ಲಿ ಭಾರತ

Update: 2020-03-08 12:18 GMT

ಮೇಲ್ಬೊರ್ನ್: : ಮಹಿಳೆಯರ ಟಿ-20 ವಿಶ್ವಕಪ್ ಫೈನಲ್ ಪಂದ್ಯಾಟದಲ್ಲಿ ಆಸ್ಟ್ರೇಲಿಯ ವನಿತೆಯರು ಭಾರತದ ವಿರುದ್ಧ ಉತ್ತಮ ರನ್ ಪೇರಿಸಿದ್ದು, 185 ರನ್ ಗಳ ಕಠಿಣ ಸವಾಲು ವಿಧಿಸಿದೆ.

ಗುರಿ ಬೆನ್ನತ್ತಿರುವ ಭಾರತ ಆರು ಓವರ್ ಗಳಲ್ಲಿ 34 ರನ್ ಗೆ 4 ವಿಕೆಟ್ ಕಳೆದುಕೊಂಡಿದ್ದು, ಸೋಲಿನ ಸುಳಿಗೆ ಸಿಲುಕಿದೆ.

ನಿಗದಿತ 20 ಓವರ್ ಗಳಲ್ಲಿ  ಆಸ್ಟ್ರೇಲಿಯ ನಾಲ್ಕು ವಿಕೆಟ್ ನಷ್ಟಕ್ಕೆ 184 ರನ್ ಬಾರಿಸಿದೆ. ಆರಂಭಿಕ ಆಟಗಾರರಾದ ಅಲಿಸ್ಸಾ ಹೀಲಿ ಮತ್ತು ಬೆತ್ ಮೂನಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಹೀಲಿ 39 ಎಸೆತಗಳಲ್ಲಿ 75 ರನ್ ಬಾರಿಸಿದರೆ, ಮೂನಿ 54 ಎಸೆತಗಳಲ್ಲಿ 78 ರನ್ ಸಿಡಿಸಿದರು.

ಭಾರತದ ಪರ ದೀಪ್ತಿ ಶರ್ಮಾ 2 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News