×
Ad

ಏಶ್ಯನ್ ಒಲಿಂಪಿಕ್ಸ್ ಕ್ವಾಲಿಪೈಯರ್: ಅಮಿತ್, ಲವ್ಲೀನಾಗೆ ಕಂಚು

Update: 2020-03-10 22:50 IST

ಅಮ್ಮಾನ್(ಜೋರ್ಡನ್), ಮಾ.10: ವಿಶ್ವದ ನಂ.1 ಬಾಕ್ಸರ್ ಅಮಿತ್ ಪಾಂಘಾಲ್(52ಕೆಜಿ) ಹಾಗೂ ಲವ್ಲೀನಾ ಬೊರ್ಗೋಹೈನ್ ಮಂಗಳವಾರ ಏಶ್ಯನ್ ಒಲಿಂಪಿಕ್ಸ್ ಕ್ವಾಲಿಫೈಯರ್‌ನಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ಈ ಇಬ್ಬರು ಸೆಮಿ ಫೈನಲ್ ಪ್ರವೇಶಿಸುವ ಮೂಲಕ ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಒಲಿಂಪಿಕ್ ಗೇಮ್ಸ್‌ನಲ್ಲಿ ಮೊದಲ ಬಾರಿ ಸ್ಥಾನ ಪಡೆದಿದ್ದಾರೆ.

ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ವಿಜೇತ ಹಾಗೂ ಅಗ್ರ ಶ್ರೇಯಾಂಕದ ಅಮಿತ್ ಚೀನಾದ ಜಿಯಾಂಗ್‌ಯುಯಾನ್ ಹ್ಯೂ ವಿರುದ್ಧ 2-3 ಅಂತರದಿಂದ ಸೋತಿದ್ದಾರೆ. ಈ ಗೆಲುವಿನ ಮೂಲಕ ಹ್ಯೂ ಸೋಲಿಗೆ ಸೇಡು ತೀರಿಸಿಕೊಂಡರು. ಒಲಿಂಪಿಕ್ಸ್ ಹಾಗೂ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ವಿಜೇತ ಹ್ಯೂ ಕಳೆದ ವರ್ಷ ಏಶ್ಯನ್ ಗೇಮ್ಸ್‌ನ ಸೆಮಿ ಫೈನಲ್‌ನಲ್ಲಿ ಅಮಿತ್‌ಗೆ ಸೋತಿದ್ದರು.

ಇದಕ್ಕೂ ಮೊದಲು ನಡೆದ ಮಹಿಳೆಯರ ವಿಭಾಗದ ಬಾಕ್ಸಿಂಗ್‌ನಲ್ಲಿ ಎರಡು ಬಾರಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪವಕ ವಿಜೇತೆ ಹಾಗೂ ಎರಡನೇ ಶ್ರೇಯಾಂಕದ ಲವ್ಲೀನಾ ಮೂರನೇ ಶ್ರೇಯಾಂಕದ ಹಾಗೂ 2018ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ವಿಜೇತೆ ಚೀನಾದ ಹಾಂಗ್ ಗೂ ವಿರುದ್ಧ 0-5 ಅಂತರದಿಂದ ಶರಣಾಗಿದ್ದಾರೆ. ಗೂ ಮುಂದಿನ ಸುತ್ತಿನಲ್ಲಿ ಹಾಲಿ ವಿಶ್ವ ಚಾಂಪಿಯನ್ ಹಾಗೂ ಅಗ್ರ ಶ್ರೇಯಾಂಕದ ತೈವಾನ್‌ನ ಚೆನ್ ನೀಯೆನ್-ಚಿನ್‌ರನ್ನು ಎದುರಿಸಲಿದ್ದಾರೆ. ಮತ್ತೊಂದು ಸೆಮಿ ಫೈನಲ್‌ನಲ್ಲಿ ನಿಯೆನ್ ಚಿನ್ ಅವರು ಥಾಯ್ಲೆಂಡ್‌ನ ಬೈಸನ್ ಮನಿಕೊನ್‌ರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News