ಅಫ್ಘಾನಿಸ್ತಾನ ವಿರುದ್ಧ ಐರ್ಲೆಂಡ್‌ಗೆ ಸೂಪರ್ ಜಯ ಕೆವಿನ್ ಕೊನೆಯ ಓವರ್‌ನಲ್ಲಿ ಸಿಕ್ಸರ್

Update: 2020-03-10 18:11 GMT

ಗ್ರೇಟರ್‌ನೋಯ್ಡ, ಮಾ.10: ಸೂಪರ್ ಓವರ್‌ನ ಕೊನೆಯ ಎಸೆತದಲ್ಲಿ ಕೆವಿನ್ ಓ ಬ್ರಿಯಾನ್ ಸಿಕ್ಸರ್ ನೆರವಿನಲ್ಲಿ ಐರ್ಲೆಂಡ್ ಇಲ್ಲಿ ನಡೆದ ಮೂರನೇ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಜಯ ಗಳಿಸಿದೆ.

ಈ ಗೆಲುವಿನೊಂದಿಗೆ ಐರ್ಲೆಂಡ್ ಸತತ 12 ಪಂದ್ಯಗಳಲ್ಲಿ ಸೋಲಿನ ಸರಮಾಲೆಯನ್ನು ಕಳೆಚಿಕೊಂಡಿದೆ. ಆದರೆ ಅಫ್ಘಾನಿಸ್ತಾನ ಕೊನೆಯ ಪಂದ್ಯದಲ್ಲಿ ಸೋತರೂ ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿದೆ.

ಅಂತಿಮ ಓವರ್‌ನಲ್ಲಿ ಐರ್ಲೆಂಡ್‌ನ ಗೆಲುವಿಗೆ 3 ರನ್‌ಗಳು ಬೇಕಾಗಿತ್ತು. ಕೆವಿನ್ ಸಿಕ್ಸರ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇದಕ್ಕೂ ಮೊದಲು ಅಫ್ಘಾನಿಸ್ತಾನ ಸೂಪರ್ ಓವರ್‌ನಲ್ಲಿ 8 ರನ್ ಗಳಿಸಿತ್ತು.

 ಪಂದ್ಯ ಟೈ: ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಐರ್ಲೆಂಡ್ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 142 ರನ್ ಗಳಿಸಿತ್ತು. ಓ ಬ್ರಿಯಾನ್ 21 ಎಸೆತಗಳಲ್ಲಿ 26 ರನ್ ಗಳಿಸಿದ್ದರು. ಇದಕ್ಕುತ್ತರವಾಗಿ ಅಫ್ಘಾನಿಸ್ತಾನ 7 ವಿಕೆಟ್ ನಷ್ಟದಲ್ಲಿ 142 ರನ್ ಗಳಿಸಿತ್ತು. ಇದರಿಂದಾಗಿ ಪಂದ್ಯ ಟೈ ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News