ಕೊರೊನಾ ಎಚ್ಚರಿಕೆಯನ್ನು ತಮಾಷೆ ಮಾಡಿದ ಬಾಸ್ಕೆಟ್ ಬಾಲ್ ಸ್ಟಾರ್ ಗೆ ಕೊರೊನಾ !

Update: 2020-03-12 17:29 GMT

ಕೊರೊನಾವೈರಸ್ ಕುರಿತ ಎಚ್ಚರಿಕೆಯನ್ನು ತಮಾಷೆ ಮಾಡಿದ ಕ್ರೀಡಾಪಟುವೊಬ್ಬರು ಇದೀಗ ಕೊರನಾವೈರಸ್ ನಿಂದ ಬಳಲುತ್ತಿರುವ ಬಗ್ಗೆ ವರದಿಯಾಗಿದೆ.

ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ಪ್ರಸಿದ್ಧ ಬಾಸ್ಕೆಟ್ ಬಾಲ್ ಆಟಗಾರ ರೂಡಿ ಗೋಬರ್ಟ್ ಮಾಧ್ಯಮದವರು ಇರಿಸಿದ್ದ ಎಲ್ಲಾ ಮೈಕ್ ಗಳನ್ನು ಮತ್ತು ರೆಕಾರ್ಡಿಂಗ್ ಡಿವೈಸ್ ಗಳನ್ನು ಉದ್ದೇಶಪೂರ್ವಕವಾಗಿ ಸ್ಪರ್ಶಿಸಿ ಕೊರೊನಾ ಭೀತಿಯ ಬಗ್ಗೆ ತಮಾಷೆ ಮಾಡಿದ್ದರು.

ಈ ಘಟನೆಯ ವಿಡಿಯೋ ವೈರಲ್ ಆಗಿತ್ತು. ಆದರೆ ಇದೀಗ  ಗೋಬರ್ಟ್ ಕೊರೊನಾವೈರಸ್ ಪೀಡಿತರಾಗಿರುವುದು ದೃಢಪಟ್ಟಿದೆ. ಗೋಬರ್ಟ್ ರ ವಿಡಿಯೋ ಈ ಕೆಳಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News