ಭಾರತ-ಪಾಕಿಸ್ತಾನ ಪಂದ್ಯವಿಲ್ಲದ ಐಸಿಸಿ ಟೆಸ್್ಟ ಚಾಂಪಿಯನ್‌ಶಿಪ್ ಅರ್ಥಹೀನ: ಯೂನಿಸ್

Update: 2020-03-17 17:45 GMT

ಕರಾಚಿ, ಮಾ.17: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನವಿಲ್ಲದ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಅರ್ಥಹೀನವಾಗಿದೆ ಎಂದು ಮಾಜಿ ವೇಗದ ಬೌಲರ್ ವಕಾರ್ ಯೂನಿಸ್ ಅಭಿಪ್ರಾಯಪಟ್ಟಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಅಗ್ರ-9 ಟೆಸ್ಟ್ ತಂಡಗಳಿವೆ. ಈ ತಂಡಗಳು ಆರು ದ್ವಿಪಕ್ಷೀಯ ಟೆಸ್ಟ್ ಸರಣಿಯನ್ನು ಆಡಲಿದ್ದು, ಲೀಗ್‌ನ ಅಂತ್ಯಕ್ಕೆ ಗರಿಷ್ಠ ಅಂಕ ಗಳಿಸುವ ಅಗ್ರ-2 ತಂಡಗಳು 2021ರ ಜೂನ್‌ನಲ್ಲಿ ಇಂಗ್ಲೆಂಡ್‌ನಲ್ಲಿ ಫೈನಲ್ ಪಂದ್ಯವನ್ನು ಆಡುತ್ತವೆ. ಪಾಕಿಸ್ತಾನ ಹಾಗೂ ಭಾರತದಲ್ಲಿ ಸರಕಾರಗಳ ಮಟ್ಟದಲ್ಲಿ ಕಠಿಣ ಪರಿಸ್ಥಿತಿ ಇದೆ ನನಗೆ ಗೊತ್ತಿದೆ. ಆದರೆ ಈ ಚಾಂಪಿಯನ್‌ಶಿಪ್ ವಿಚಾರದಲ್ಲಿ ಐಸಿಸಿ ಹೆಚ್ಚು ಪೂರ್ವಭಾವಿ ಪಾತ್ರವನ್ನು ವಹಿಸುವ ಅಗತ್ಯವಿದೆ. ಐಸಿಸಿ ಮಧ್ಯ ಪ್ರವೇಶಿಸಿ ಏನಾದರೂ ಮಾಡಲೇಬೇಕಾಗಿದೆ. ನನ್ನ ಪ್ರಕಾರ ಪಾಕಿಸ್ತಾನ ಹಾಗೂ ಭಾರತ ಟೆಸ್ಟ್ ಪಂದ್ಯಗಳಿಲ್ಲದ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ಅರ್ಥವಿಲ್ಲ ಎಂದು ಅಭಿಪ್ರಾಯಪಟ್ಟರು.

2008ರ ಮುಂಬೈ ಮೇಲೆ ಉಗ್ರರ ದಾಳಿ ನಡೆದ ಬಳಿಕ ಭಾರತ ತಂಡ ಪಾಕ್‌ಗೆ ಪ್ರವಾಸ ಕೈಗೊಂಡಿಲ್ಲ. 2007ರಿಂದ ರಾಜಕೀಯ ಹಾಗೂ ರಾಜತಾಂತ್ರಿಕ ಕಾರಣಕ್ಕೆ ಉಭಯ ದೇಶಗಳು ಪೂರ್ಣಪ್ರಮಾಣದ ಟೆಸ್ಟ್ ಸರಣಿಯನ್ನು ಆಡಿಲ್ಲ.

ಭಾರತದೊಂದಿಗಿನ ರಾಜತಾಂತ್ರಿಕ ಸಂಬಂಧ ಸರಿಯಿಲ್ಲದ ಕಾರಣ ತನ್ನ 14 ವರ್ಷಗಳ ವೃತ್ತಿಜೀವನದಲ್ಲಿ ಭಾರತ ವಿರುದ್ಧ ಕೇವಲ 4 ಟೆಸ್ಟ್ ಪಂದ್ಯಗಳನ್ನು ಆಡಿದ್ದೇನೆ ಎಂದು ಪಾಕ್ ಪರ 87 ಟೆಸ್ಟ್ ಹಾಗೂ 262 ಏಕದಿನ ಪಂದ್ಯಗಳನ್ನು ಆಡಿದ್ದ ವಕಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News