ಬಾಬರ್ ಆಝಮ್ ಬ್ಯಾಟ್‌ನಿಂದ ರನ್ ಹೊಳೆ

Update: 2020-03-17 17:57 GMT

ಕರಾಚಿ, ಮಾ.17: ಪ್ರಪಂಚದಾದ್ಯಂತ ಹೆಚ್ಚು ಕ್ರಿಕೆಟ್ ನಡೆಯುತ್ತಿಲ್ಲ. ಎಲ್ಲಿಯೂ ಹೆಚ್ಚು ಏನೂ ನಡೆಯುತ್ತಿಲ್ಲ. ಹೀಗಾಗಿ ಕ್ರೀಡಾ ಜಗತ್ತಿಗೆ ಗರಬರಡಿದೆ.

  ಐಪಿಎಲ್‌ನ್ನು ಮುಂದೂಡಲಾಗಿದೆ. ಇಂಗ್ಲೆಂಡ್ ತನ್ನ ಆಟಗಾರರನ್ನು ಶ್ರೀಲಂಕಾದಿಂದ ಹಿಂದಕ್ಕೆ ಕರೆಸಿಕೊಂಡಿದೆ, ಭಾರತ-ದಕ್ಷಿಣ ಆಫ್ರಿಕಾ ಸರಣಿಯನ್ನು ರದ್ದುಗೊಳಿಸಲಾಗಿದೆ. ಮೂರು ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯ ಮಳೆಗಾಹುತಿಯಾಗಿತ್ತು. ಸರಣಿಯಲ್ಲಿ ಉಳಿದರೆಡು ಪಂದ್ಯಗಳನ್ನು ರದ್ದುಪಡಿಸಲಾಗಿದೆ.

  ಆದರೆ ನಮ್ಮ ವಾಯುವ್ಯ ಗಡಿಯುದ್ದಕ್ಕೂ ಕ್ರಿಕೆಟ್ ಪಂದ್ಯಾವಳಿ ಸೋಮವಾರ ತನಕ ನಡೆಯುತ್ತಿತ್ತು. ಹೌದು, ಪಾಕಿಸ್ತಾನ ತನ್ನ ಪ್ರಧಾನ ಟಿ-20 ಪಂದ್ಯಾವಳಿ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ಆಯೋಜಿಸಿತ್ತು. ಜಗತ್ತಿನಲ್ಲಿ ಕೊರೋನ ಭಯದ ನಡುವೆಯೂ ಕ್ರಿಕೆಟ್‌ನ್ನು ಆಯೋಜಿಸಿರುವ ಏಕೈಕ ದೇಶವಾಗಿದೆ. ಕರಾಚಿ ಕಿಂಗ್ಸ್ 10 ಪಂದ್ಯಗಳಲ್ಲಿ 5 ಜಯ ಮತ್ತು 4 ಸೋಲುಗಳ ನಂತರ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ತಂಡದ ಯಶಸ್ವಿಗೆ ಕಾರಣವಾದ ವ್ಯಕ್ತಿ ಪಾಕಿಸ್ತಾನದ ಸೀಮಿತ ಓವರ್‌ಗಳ ಕ್ರಿಕೆಟ್‌ನ ಸೂಪರ್‌ಸ್ಟಾರ್ ಎನಿಸಿಕೊಂಡಿರುವ ಬಾಬರ್ ಆಝಮ್.

   ಆಝಮ್ ಬ್ಯಾಟಿಂಗ್ ಸರಾಸರಿ 54.17. ಟ್ವೆಂಟಿ-20 ಹಾಗೂ ಏಕದಿನ ಪಂದ್ಯಗಳಲ್ಲಿ ಅವರ ಸರಾಸರಿ ರನ್ 50.72 ಎರಡೂ ಸ್ವರೂಪಗಳಲ್ಲಿ ವಿರಾಟ್ ಕೊಹ್ಲಿಗೆ ಎರಡನೆಯ ಸ್ಥಾನದಲ್ಲಿದ್ದಾರೆ. ಪಿಎಸ್‌ಎಲ್‌ನಲ್ಲಿ ಅವರ ಪ್ರದರ್ಶನ ಭಿನ್ನವಾಗಿರಲಿಲ್ಲ.

    ಆಝಮ್ ಪಿಎಸ್‌ಎಲ್ 2020ರ ಲ್ಲಿ ಅತಿ ಹೆಚ್ಚು ರನ್ ದಾಖಲಿಸಿದ್ದಾರೆ. ಅವರು ಗ್ರೂಪ್ ಹಂತದಲ್ಲಿ 9 ಇನಿಂಗ್ಸ್‌ಗಳಲ್ಲಿ 3 ಅರ್ಧಶತಕಗಳನ್ನು ಒಳಗೊಂಡ 345 ರನ್ ಗಳಿಸಿದ್ದಾರೆ. ಸರಾಸರಿ ರನ್ 49.28. ಆಝಮ್ ಪಂದ್ಯಾವಳಿಯ ಎರಡನೇ ಅತಿ ಹೆಚ್ಚು ಸ್ಕೋರರ್. ಪಂದ್ಯಾವಳಿಯಲ್ಲಿ ತಂಡ ಗಳಿಸಿದ ರನ್‌ನಲ್ಲಿ ಆಝಮ್ ಪಾಲು ಶೇ. 23.74. ಪಿಎಸ್‌ಎಲ್ 2020ರಲ್ಲಿ ಆಝಮ್ ತನ್ನ ತಂಡದ ರನ್ ಗಳಿಕೆಯ ನಾಲ್ಕನೇ ಒಂದು ಭಾಗದಷ್ಟು ರನ್ ಸೇರಿಸಿದ್ದಾರೆ. ಪಂದ್ಯಾವಳಿಯಲ್ಲಿ ಆಝಮ್ ಆರು 25-ಪ್ಲಸ್ ಸ್ಕೋರ್‌ಗಳೊಂದಿಗೆ ಸ್ಥಿರ ಪ್ರದರ್ಶನ ನೀಡಿದ್ದರು. 4 ಪಂದ್ಯಗಳಲ್ಲಿ, ಅವರು ಪವರ್‌ಪ್ಲೇನಲ್ಲಿ ಕಡಿಮೆ ಸ್ಕೋರ್‌ಗಾಗಿ ತಮ್ಮ ಆರಂಭಿಕ ಜೊತೆದಾರ ಶಾರ್ಜೀಲ್ ಖಾನ್ ಅವರನ್ನು ಕಳೆದುಕೊಂಡರು. ಕರಾಚಿಯನ್ನು ರಕ್ಷಿಸಿದರು ಮತ್ತು ಇನಿಂಗ್ಸ್ಸ್‌ನ್ನು ಕಟ್ಟಲು ಸಹಾಯ ಮಾಡಿದರು.

 ಪಂದ್ಯಾವಳಿಯಲ್ಲಿ ಅವರ ಬ್ಯಾಟಿಂಗ್‌ನ ಒಂದು ಲಕ್ಷಣವೆಂದರೆ ಅವರು ಹೊಡೆದ ಹೆಚ್ಚಿನ ಸಂಖ್ಯೆಯ ಬೌಂಡರಿಗಳು(43). ಇದು ಪಿಎಸ್‌ಎಲ್ 2020ರ ಗರಿಷ್ಠ ಮೊತ್ತವಾಗಿದೆ.

  ಒಟ್ಟಾರೆಯಾಗಿ, ಆಝಮ್ 138 ಟ್ವೆಂಟಿ-20 ಇನಿಂಗ್ಸ್ ಗಳಲ್ಲಿ 4,861 ರನ್‌ಗಳನ್ನು ಒಟ್ಟು 43.01 ಸರಾಸರಿಯಲ್ಲಿ ಗಳಿಸಿದ್ದಾರೆ. ಟ್ವೆಂಟಿ - 20 ಕ್ರಿಕೆಟ್‌ನಲ್ಲಿ ಅವರು ಇನಿಂಗ್ಸ್ ಗೆ ಸರಾಸರಿ 35.37 ರನ್ ಗಳಿಸಿದ್ದಾರೆ . ಕೆ.ಎಲ್. ರಾಹುಲ್ (34.54), ಶಾನ್ ಮಾರ್ಷ್ (33.65), ಕ್ರಿಸ್ ಗೇಲ್ (33.58) ಮತ್ತು ವಿರಾಟ್ ಕೊಹ್ಲಿ (33.46) ಅಗ್ರ 5ರಲ್ಲಿರುವ ಆಟಗಾರರು. ‘ಬಾಬರ್’ ಎಂಬ ಪದಕ್ಕೆ ಪರ್ಷಿಯನ್ ಭಾಷೆಯಲ್ಲಿ ‘ಸಿಂಹ’ ಎಂದರ್ಥ. ಕೋವಿಡ್ -19ರ ವಾತಾವರಣದಲ್ಲೂ ಆಝಮ್ ಖಂಡಿತವಾಗಿಯೂ ತನ್ನ ಹೆಸರಿಗೆ ತಕ್ಕಂತೆ ಆಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News