×
Ad

3 ತಿಂಗಳಲ್ಲಿ ಕೊರೋನವೈರಸ್ ಸೋಂಕು ಕಡಿಮೆಯಾಗುವ ವಿಶ್ವಾಸ: ಬ್ರಿಟನ್ ಪ್ರಧಾನಿ

Update: 2020-03-20 21:10 IST

ಲಂಡನ್, ಮಾ. 20: ಸಾಮಾಜಿಕ ಸಂಪರ್ಕವನ್ನು ಕಡಿತಗೊಳಿಸುವಂಥ ಕಠಿಣ ಕ್ರಮಗಳ ಮೂಲಕ ಬ್ರಿಟನ್‌ನಲ್ಲಿ ಮುಂದಿನ ಮೂರು ತಿಂಗಳುಗಳಲ್ಲಿ ಕೊರೋನವೈರಸ್ ಹರಡುವಿಕೆಯ ವೇಗವನ್ನು ಕಡಿಮೆ ಮಾಡಬಹುದು ಎಂಬ ವಿಶ್ವಾಸ ನನಗಿದೆ ಎಂದು ಆ ದೇಶದ ಪ್ರಧಾನಿ ಬೊರಿಸ್ ಜಾನ್ಸನ್ ಗುರುವಾರ ಹೇಳಿದ್ದಾರೆ.

ಸೋಂಕು ದರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ, ಹೆಚ್ಚೆಚ್ಚು ಜನರು ಮನೆಯಿಂದ ಕೆಲಸ ಮಾಡಬೇಕು ಹಾಗೂ ಸಾರ್ವಜನಿಕ ಸಾರಿಗೆ, ಪಬ್‌ಗಳು, ಕ್ಲಬ್‌ಗಳು ಮತ್ತು ರೆಸ್ಟೋರೆಂಟ್‌ಗಳಿಂದ ದೂರವಿರಬೇಕು ಎಂಬುದಾಗಿ ಬ್ರಿಟನ್ ಸರಕಾರ ಈ ವಾರದ ಆದಿ ಭಾಗದಲ್ಲಿ ಕರೆ ನೀಡಿದೆ.

ಬ್ರಿಟನ್‌ನಲ್ಲಿ ಕೊರೋನವೈರಸ್‌ನಿಂದಾಗಿ ಮೃತಪಟ್ಟವರ ಸಂಖ್ಯೆ 144ಕ್ಕೆ ಏರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News