ಜಿ7 ಶೃಂಗಸಭೆ ರದ್ದುಪಡಿಸಿದ ಟ್ರಂಪ್: ಇನ್ನು ವೀಡಿಯೊ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮ

Update: 2020-03-20 15:50 GMT

ವಾಶಿಂಗ್ಟನ್, ಮಾ. 20: ಕೊರೋನವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, ಈ ವರ್ಷ ವಾಶಿಂಗ್ಟನ್ ಸಮೀಪದ ಕ್ಯಾಂಪ್ ಡೇವಿಡ್‌ನಲ್ಲಿ ನಡೆಯಬೇಕಾಗಿದ್ದ ಜಿ7 ಶೃಂಗಸಭೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರದ್ದುಪಡಿಸಿದ್ದಾರೆ ಹಾಗೂ ಅದರ ಬದಲಿಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ಶೃಂಗಸಭೆ ನಡೆಸಿಕೊಡಲಿದ್ದಾರೆ ಎಂದು ಶ್ವೇತಭವನ ಗುರುವಾರ ಘೋಷಿಸಿದೆ.

ಏಳು ಶ್ರೀಮಂತ ಪ್ರಜಾಪ್ರಭುತ್ವ ದೇಶಗಳ ಗುಂಪಿನ ನೇತೃತ್ವವನ್ನು 2020ರಲ್ಲಿ ಅಮೆರಿಕ ವಹಿಸಿದೆ. ಕ್ಯಾಂಪ್ ಡೇವಿಡ್‌ನಲ್ಲಿ ಜೂನ್‌ನಲ್ಲಿ ಸಮ್ಮೇಳನ ನಡೆಯಬೇಕಾಗಿತ್ತು.

‘‘ಕೋರೊನವೈರಸ್ ಸಾಂಕ್ರಾಮಿಕ ರೋಗವನ್ನು ಎದುರಿಸುವ ನಿಟ್ಟಿನಲ್ಲಿ ಪ್ರತಿಯೊಂದು ದೇಶಕ್ಕೂ ತನ್ನಲ್ಲಿ ಲಭ್ಯವಿರುವ ಸಂಪನ್ಮೂಲವನ್ನು ಗರಿಷ್ಠ ಮಟ್ಟದಲ್ಲಿ ವಿನಿಯೋಗಿಸಲು ಸಾಧ್ಯವಾಗುವಂತೆ ಶೃಂಗಸಭೆಯನ್ನು ವೀಡಿಯೊ ಕಾನ್ಫರೆನ್ಸ್ ಮೂಲಕ ನಡೆಸಲಾಗುವುದು’’ ಎಂದು ಶ್ವೇತಭವನದ ವಕ್ತಾರ ಜೂಡ್ ಡೀರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News