ತಕ್ಷಣ 750 ಕೋಟಿ ರೂ. ಠೇವಣಿ ಇಡಲು ಅನಿಲ್ ಅಂಬಾನಿಗೆ ನ್ಯಾಯಾಲಯ ಆದೇಶ

Update: 2020-03-20 16:37 GMT

ಲಂಡನ್, ಮಾ. 20: ಒಂದು ಕಾಲದ ದಿಗ್ಗಜ ಉದ್ಯಮಿ ಅನಿಲ್ ಅಂಬಾನಿ  100 ಮಿಲಿಯ ಡಾಲರ್ (ಸುಮಾರು 750 ಕೋಟಿ ರೂಪಾಯಿ) ಮೊತ್ತವನ್ನು ನ್ಯಾಯಾಲಯದ ಖಾತೆಗೆ ಜಮಾ ಮಾಡಬೇಕಾಗಿದೆ.

ಚೀನಾದ ಮೂರು ಬ್ಯಾಂಕ್‌ಗಳಿಗೆ ನೀಡಬೇಕಾಗಿರುವ ಹಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ, 100 ಮಿಲಿಯನ್ ಡಾಲರ್ ಮೊತ್ತವನ್ನು ನ್ಯಾಯಾಲಯಕ್ಕೆ ಜಮಾ ಮಾಡಬೇಕೆಂದು ಬ್ರಿಟನ್ ನ್ಯಾಯಾಲಯವೊಂದು ನೀಡಿರುವ ಆದೇಶವನ್ನು ಪ್ರಶ್ನಿಸಿ ಅನಿಲ್ ಅಂಬಾನಿ ಸಲ್ಲಿಸಿರುವ ಮೇಲ್ಮನವಿ ತಿರಸ್ಕೃತಗೊಂಡಿದೆ.

100 ಮಿಲಿಯ ಡಾಲರ್ ಮೊತ್ತವನ್ನು ಜಮಾ ಮಾಡಲು ಅವರು ವಿಫಲರಾದರೆ, ಚೀನಾದ ಬ್ಯಾಂಕ್ ‌ಗಳು ಅವರ ವಿರುದ್ಧ ಹೂಡಿರುವ 700 ಮಿಲಿಯ ಡಾಲರ್ (ಸುಮಾರು 5,260 ಕೋಟಿ ರೂಪಾಯಿ) ವಸೂಲಿ ಮೊಕದ್ದಮೆಯನ್ನು ಅವರು ತನ್ನಿಂತಾನೆ ಕಳೆದುಕೊಳ್ಳುತ್ತಾರೆ.

ತಿಳಿಸಲಾಗಿರುವ ಮೊತ್ತವನ್ನು ಜಮಾ ಮಾಡಲು ಅವರು ವಿಫಲರಾದರೆ, ಚೀನಾದ ಬ್ಯಾಂಕ್‌ಗಳು ಅವರ ವಿರುದ್ಧ ತೀರ್ಪು ನೀಡುವಂತೆ ನ್ಯಾಯಾಲಯವನ್ನು ಕೋರಬಹುದು ಹಾಗೂ ಭಾರತ ಮತ್ತು ಇತರೆಡೆಗಳಲ್ಲಿರುವ ಅಂಬಾನಿಯ ಸೊತ್ತುಗಳನ್ನು ಮುಟ್ಟುಗೋಲು ಹಾಕಲು ಅನುಮತಿ ನೀಡುವಂತೆ ಕೋರಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News