ಸ್ಪೇನ್: ಹೊಸದಾಗಿ 394 ಸಾವು

Update: 2020-03-22 17:11 GMT

ಮ್ಯಾಡ್ರಿಡ್ (ಸ್ಪೇನ್), ಮಾ. 22: ಕಳೆದ 24 ಗಂಟೆಗಳ ಅವಧಿಯಲ್ಲಿ ಸ್ಪೇನ್‌ನಲ್ಲಿ ಕೊರೋನವೈರಸ್‌ನಿಂದಾಗಿ 394 ಸಾವುಗಳು ಸಂಭವಿಸಿವೆ. ಇದರೊಂದಿಗೆ ಆ ದೇಶದಲ್ಲಿ ಸಂಭವಿಸಿದ ಒಟ್ಟು ಸಾವಿನ ಸಂಖ್ಯೆ 1,720ಕ್ಕೆ ಏರಿದೆ.

ಯುರೋಪ್ ಖಂಡದಲ್ಲಿ ಇಟಲಿ ಬಳಿಕ ಕೊರೋನವೈರಸ್‌ನ ಅತಿ ಹೆಚ್ಚು ಬಾಧೆಗೊಳಗಾದ ದೇಶ ಸ್ಪೇನ್ ಆಗಿದೆ. ಇದು ಕಳೆದ ದಿನದ ಸಾವಿನ ಸಂಖ್ಯೆಗಿಂತ 30 ಶೇಕಡ ಅಧಿಕವಾಗಿದೆ.

ಅದೇ ವೇಳೆ, ದೇಶದಲ್ಲಿ ಹೊಸದಾಗಿ 3,646 ಸೋಂಕು ಪ್ರಕರಣಗಳು ದೃಢಪಟ್ಟಿವೆ ಎಂದು ಆರೋಗ್ಯ ಸಚಿವಾಲಯ ಹೊರಡಿಸಿದ ಅಂಕಿಅಂಶಗಳು ತಿಳಿಸಿವೆ. ಇದರೊಂದಿಗೆ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 28,572ಕ್ಕೆ ಏರಿದೆ.

ಮುಂದಿನ ದಿನಗಳಲ್ಲಿ ಸೋಂಕಿಗೊಳಗಾದವರ ಸಂಖ್ಯೆ ಹೆಚ್ಚಲಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

1,785 ರೋಗಿಗಳಿಗೆ ತೀವ್ರ ನಿಗಾ ಘಟಕಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗಳಲ್ಲಿ ರೋಗಿಗಳು ಕಿಕ್ಕಿರಿದು ಸೇರಿರುವುದು ಅಧಿಕಾರಿಗಳ ತಲೆನೋವಿಗೆ ಕಾರಣವಾಗಿದೆ.

ಪರಿಸ್ಥಿತಿ ಬಿಗಡಾಯಿಸಲಿದೆ: ಪ್ರಧಾನಿ

ಸ್ಪೇನ್‌ನಲ್ಲಿ ಕೊರೋನವೈರಸ್ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ ಎಂದು ದೇಶದ ಪ್ರಧಾನಿ ಪೆಡ್ರೊ ಸ್ಯಾಂಚೆಝ್ ಶನಿವಾರ ರಾತ್ರಿ ಎಚ್ಚರಿಸಿದ್ದಾರೆ.

‘‘ಮುಂದಿನ ದಿನಗಳಲ್ಲಿ ಬರಬಹುದಾದ ಅತ್ಯಂತ ಕಠಿಣ ದಿನಗಳಿಗಾಗಿ ನಮ್ಮನ್ನು ನಾವು ಮಾನಸಿಕವಾಗಿ ಮತ್ತು ದೈಹಿಕವಾಗಿ ಸಿದ್ಧಗೊಳಿಸಬೇಕಾಗಿದೆ’’ ಎಂದು ಟೆಲಿವಿಶನ್‌ನಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News