ಚೀನಾದಲ್ಲಿ ಮೊದಲ ದೇಶಿ ಸೋಂಕು ಪ್ರಕರಣ

Update: 2020-03-22 17:32 GMT

ಬೀಜಿಂಗ್, ಮಾ. 22: ಚೀನಾವು ಮೂರು ದಿನಗಳ ಬಳಿಕ ಮೊದಲ ಬಾರಿಗೆ ಮೊದಲ ದೇಶಿ ಕೊರೋನವೈರಸ್ ಸೋಂಕಿನ ವರದಿ ಮಾಡಿದೆ. ಅದೇ ವೇಳೆ, ಚೀನಾದಲ್ಲಿರುವ ವಿದೇಶಿಯರು ಸೋಂಕಿಗೆ ಒಳಗಾಗಿರುವ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.

ಅದೇ ವೇಳೆ, ಕೊರೋನವೈರಸ್ ಮರಳಿ ಬಾರದಂತೆ ಹಾಗೂ ಎರಡನೇ ಹಂತದ ಸೋಂಕುಗಳನ್ನು ತಡೆಯಲು ಅದು ಹಲವು ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ.

ಚೀನಾದಲ್ಲಿ ಶನಿವಾರ 46 ಹೊಸ ಕೊರೋನವೈರಸ್ ಸೋಂಕು ಪ್ರಕರಣಗಳು ವರದಿಯಾಗಿವೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ. ಈ ಪೈಕಿ ಓರ್ವ ಚೀನಿ ಪ್ರಜೆ ಹಾಗೂ 45 ವಿದೇಶಿಯರು.

ಚೀನಿ ಪ್ರಜೆ ಸೋಂಕಿಗೆ ಒಳಗಾಗಿರುವ ಪ್ರಕರಣವು ಗುವಾಂಗ್‌ಝೂನಲ್ಲಿ ಸಂಭವಿಸಿದೆ. ಆ ವ್ಯಕ್ತಿಗೆ ಸೋಂಕು ವಿದೇಶಿ ವ್ಯಕ್ತಿಯಿಂದ ತಗಲಿದೆ ಎಂದು ಆಯೋಗ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News