ಕೊರೋನವೈರಸ್ ಸೋಂಕು: ಎಲ್ಲ ದೇಶಗಳನ್ನು ಹಿಂದಿಕ್ಕಿದ ಅಮೆರಿಕ

Update: 2020-03-27 16:41 GMT

ನ್ಯೂಯಾರ್ಕ್, ಮಾ. 27: ನೋವೆಲ್-ಕೊರೋನವೈರಸ್ ಸೋಂಕಿತರ ಸಂಖ್ಯೆಯಲ್ಲಿ ಅಮೆರಿಕವು ಇತರ ಎಲ್ಲ ದೇಶಗಳನ್ನು ಹಿಂದಿಕ್ಕಿದೆ. ಅಲ್ಲಿ ಈಗ 83,000ಕ್ಕೂ ಅಧಿಕ ಮಂದಿ ಕೋವಿಡ್-19 ಕಾಯಿಲೆಗೆ ಒಳಗಾಗಿದ್ದಾರೆ. ಇದರೊಂದಿಗೆ ಅದು ಇಟಲಿ ಮತ್ತು ಚೀನಾವನ್ನು ಹಿಂದೆ ಹಾಕಿದೆ.

ಅಮೆರಿಕದಲ್ಲಿ ಒಟ್ಟು 1,178 ಸಾವುಗಳು ಈವರೆಗೆ ವರದಿಯಾಗಿವೆ.

‘‘ನಾವು ನೂತನ-ಕೊರೋನವೈರಸ್ ವಿರುದ್ಧ ಯುದ್ಧವನ್ನೇ ಸಾರಿದ್ದೇವೆ. ಲಭ್ಯವಿರುವ ಎಲ್ಲ ಆರ್ಥಿಕ, ವೈಜ್ಞಾನಿಕ, ವೈದ್ಯಕೀಯ, ಔಷಧೀಯ ಮತ್ತು ಸೇನಾ ಸಂಪನ್ಮೂಲಗಳನ್ನು ನಾವು ಇದಕ್ಕಾಗಿ ಬಳಸಿಕೊಳ್ಳುತ್ತಿದ್ದೇವೆ’’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News